ರಾಜೇಶ್ವರ ಗ್ರಾಪಂಗೆ ನಂದಾಬಾಯಿ ಅಧ್ಯಕ್ಷೆ

24BK3
Published on

ಬಸವಕಲ್ಯಾಣ: ರಾಜೇಶ್ವರ ಪಂಚಾಯಿತಿಯ ಎರಡನೇ ಅವಧಿಗಾಗಿ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಂದಾಬಾಯಿ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನ ಆಯ್ಕೆ ನಡೆಯದೆ ಮುಂದೂಡಲಾಯಿತು.
೩೪ ಸದಸ್ಯ ಬಲ ಹೊಂದಿರುವ ರಾಜೇಶ್ವರ ಗ್ರಾಪಂಗೆ ಪರಿಶಿಷ್ಟ ಪಂಗಡ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಿದ್ದು, ನಂದಾಬಾಯಿ ಪ್ರಭು ಹಾಗೂ ಸರಸ್ವತಿ ಪ್ರಭು ನಾಮಪತ್ರ ಸಲ್ಲಿಸಿದರು.
ಸರಸ್ವತಿ ಪ್ರಭು ತಮ್ಮ ನಾಮಪತ್ರ ವಾಪಸ್ ಪಡೆದ ಕಾರಣ ನಂದಾಬಾಯಿ ಪ್ರಭು ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿ, ತಾಪಂ ಇಒ ಕಿರಣ ಪಾಟೀಲ್ ಫಲಿತಾಂಶ ಪ್ರಕಟಿಸಿದರು. ಪಿಡಿಒ ಪದ್ಮಣ್ಣ ಗಾಣಿಗೇರ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು, ಅನೀತಾ ಮಲ್ಲಿಕಾರ್ಜುನ, ಭಾಗೀರಥಿ ಬಸವಂತ ಮತ್ತು ಸಮರೀನ್ ಬೇಗಂ ಸೈಯದ್ ಅಜಮೋದ್ದಿನ್ ನಾಮಪತ್ರ ಸಲ್ಲಿಸಿದ್ದರು. ಆದರೆ ಮೂವರೂ ನಾಮಪತ್ರ ಹಿಂಪಡೆದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿಲ್ಲ.
ಗ್ರಾಮೀಣ ಠಾಣೆ ಪಿಎಸ್‌ಐ ಅಂಬರೀಶ ವಾಗ್ಮೊರೆ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಅವಿರೊಧವಾಗಿ ಅಧ್ಯಕ್ಷ ಸ್ಥಾನ ಪ್ರಕಟಿಸುತ್ತಿದ್ದಂತೆ ಬೆಂಬಲಿಗರು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net