ರಾಜೇಶ್ ಕೋಟ್ಯಾನ್‌ಗೆ ಪ್ರಗತಿಪರ ಮೀನು ಕೃಷಿಕ ಪ್ರಶಸ್ತಿ

New Project (10)
Published on

ಮೂಡುಬಿದಿರೆ: ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಣಪಿಲದ ಮೀನು ಕೃಷಿಕ, ರಾಜ್ ಮತ್ಸೃ ಕೇಂದ್ರದ ಮುಖ್ಯಸ್ಥ ರಾಜೇಶ್ ಕೋಟ್ಯಾನ್ ಅವರಿಗೆ ಪ್ರಗತಿಪರ ಮೀನು ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜೇಶ್ ಕೋಟ್ಯಾನ್ ಮೂಡುಬಿದಿರೆ ಪುರಸಭೆಯಲ್ಲಿ ಜೂನಿಯರ್ ಪ್ರೊಗ್ರಾಮರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿ.ವಿ, ಬೀದರ, ಜಲಕೃಷಿ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ಧಯ್ಯ, ಕಪಪಮೀವಿವಿ ವಿಸ್ತರಣಾ ನಿರ್ದೇಶಕ ಡಾ.ಬಸವರಾಜ ಅವಟಿ, ಮಂಗಳೂರು ಪಿಳ್ಳೈ ಅಕ್ವಾಕಲ್ಚರ್ ಫೌಂಡೇಶನ್‌ನ (ಭಾರತೀಯ ಶಾಖೆ) ಡಾ.ಎಸ್.ಎಂ. ಶಿವಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net