ರವಿ ಕೂಡ್ಲಗಿ ಪ್ರಶಸ್ತಿಗೆ ರಾಜೇಂದ್ರ ಆಯ್ಕೆ

29 vikram 5
Published on

ಧಾರವಾಡ: ನಗರದ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿ ತಬಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭಾನ್ವಿತ ಸಾಧಕರಿಗೆ ನೀಡುವ ತಬಲಾ ಮಾಂತ್ರಿಕ ಪಂ.ರವಿ ಕೂಡ್ಲಗಿ ಪ್ರಶಸ್ತಿಗೆ ತಬಲಾ ವಾದಕ ಪಂ.ರಾಜೇಂದ್ರ ನಾಕೋಡ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಡಿ. 17ರಂದು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿ ಭವನದಲ್ಲಿ ಏರ್ಪಡಿಸಿರುವ ಪಂ.ರವಿ ಕೂಡ್ಲಗಿ 9ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಂಕರ ಹಲಗತ್ತಿ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಡಾ. ಜ್ಯೋತಿಲಕ್ಷ್ಮೀ ಡಿ.ಪಿ, ಮಲ್ಲಿಕಾರ್ಜುನ ಚಿಕ್ಕಮಠ, ಡಾ.ಎ.ಎಲ್.ದೇಸಾಯಿ, ಡಾ. ಗುರುಬಸವ ಮಹಾಮನೆ ಸದಸ್ಯರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net