ರಾಜೇಂದ್ರ ನಾಯ್ಕ್ ಸೊರಬ ಟಿಎಪಿಸಿಎಂಎಸ್ ಅಧ್ಯಕ್ಷ

28sor1
ಸೊರಬ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂನತ ಅಧ್ಯಕ್ಷ-ಉಪಾಧ್ಯಕ್ಷರನ್ನು ಸದಸ್ಯರು ಸನ್ಮಾನಿಸಿದರು. ಕೀರ್ತಿರಾಜ್, ಯೂಸೂಫ್ ಸಾಬ್, ರಾಜಶೇಖರ್, ಜಯಶೀಲಗೌಡ, ರಾಜಪ್ಪ ಇತರರಿದ್ದರು.
Published on

ಸೊರಬ: ಸೊರಬ ಟಿಎಪಿಸಿಎಂಎಸ್ (ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ)ದ ಎರಡನೇ ಅವಽಗೆ ಕಾಂಗ್ರೆಸ್ ಬೆಂಬಲಿತ ಟಿ.ಬಿ.ರಾಜೇಂದ್ರ ನಾಯ್ಕ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಎನ್.ಬಿ.ಹಿರಿಯಣ್ಣ ಕಲ್ಲಂಬಿ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿ ಬೆಂಬಲಿತರಾದ ಕೀರ್ತಿರಾಜ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶಿವಮೂರ್ತಿ ಗೌಡ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸೋಮವಾರ ಚುನಾವಣೆ ನಿಗದಿಯಾಗಿತ್ತು. ೧೫ ಸದಸ್ಯರ ಬಲವುಳ್ಳ ಸಹಕಾರ ಸಂಘದಲ್ಲಿ ೧೨ ಜನ ಸದಸ್ಯರು ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಸದಸ್ಯರಾದ ಶಿವಮೂರ್ತಿ ಗೌಡ, ಬಿ.ನಾಗರಾಜ ಗೌಡ ಹಾಗೂ ಜಿ.ವೀರಭದ್ರಪ್ಪ ಗೈರಾಗಿದ್ದರು. ಚುನಾವಣಾಽಕಾರಿಯಾಗಿ ಸಹಕಾರ ಅಭಿವೃದ್ಧಿ ಅಽಕಾರಿ ಟಿ.ಬಿ.ಪ್ರಕಾಶ್ ಕಾರ್ಯನಿರ್ವಹಿಸಿದರು. ಟಿಎಪಿಸಿಎಂಸಿಯ ಕಾರ್ಯದರ್ಶಿ ಕೃಷ್ಣ ಸಹಕರಿಸಿದರು.
ನೂತನ ಅಧ್ಯಕ್ಷ ಟಿ.ಬಿ.ರಾಜೇಂದ್ರ ನಾಯ್ಕ್ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ನೂತನ ಉಪಾಧ್ಯಕ್ಷ ಎನ್.ಬಿ. ಹಿರಿಯಣ್ಣ ಕಲ್ಲಂಬಿ ಮಾತನಾಡಿ, ಬದಲಾದ ರಾಜಕೀಯ ಸನ್ನಿವೇಶÀದಲ್ಲಿ ಉಪಾಧ್ಯಕ್ಷ ಸ್ಥಾನ ಲಭಿಸಿದ್ದು, ಹುದ್ದೆಗೆ ಚ್ಯುತಿ ಬರದಂತೆ ಎಲ್ಲ ಸದಸ್ಯರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಸದಸ್ಯರಾದ ಕೀರ್ತಿರಾಜ್, ಯೂಸೂಫ್ ಸಾಬ್, ಎಲ್.ಜಿ.ರಾಜಶೇಖರ್, ಎಚ್.ಕೆ.ಜಯಶೀಲ ಗೌಡ, ಎಚ್.ರಾಜಪ್ಪ, ಹನುಮಂತಪ್ಪ, ಕೆ.ವೈ.ಸುರೇಶ್, ಚಿತ್ರಮ್ಮ, ಸೌಭಾಗ್ಯಾ, ಭೈರಪ್ಪ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಬಿ. ಅಣ್ಣಪ್ಪ ಹಾಲಘಟ್ಟ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಮುಖಂಡರಾದ ತಬಲಿ ಬಂಗಾರಪ್ಪ, ಕೆ.ಪಿ. ರುದ್ರಗೌಡ, ಸುರೇಶ್ ಹಾವಣ್ಣನವರ್, ಕೆ.ವಿ.ಗೌಡ, ಸುರೇಶ್ ಬಿಳವಾಣಿ, ಶಿವಪ್ಪ ಉದ್ರಿ, ವಿಶ್ವನಾಥ ಕೊಡಕಣಿ, ಯು.ಫಯಾಜ್ ಅಹ್ಮದ್, ಶಿವಪ್ಪ ಯಡಗೊಪ್ಪ, ಮೆಹಬೂಬ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net