ರಾಜೇಂದ್ರ ಸಣ್ಣಕ್ಕಿ ಕಾರ್ಯ ಮಾದರಿ

4Koujalagi1
Published on

ಕೌಜಲಗಿ: ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯ ಮಾದರಿಯಾಗಿದೆ ಎಂದು ಬಾಗೋಜಿಕೊಪ್ಪದ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಅಭಿಮಾನಿ ಬಳಗದಿಂದ ಈಚೆಗೆ ಹಮ್ಮಿಕೊಂಡಿದ್ದ ಡಾ.ರಾಜೇಂದ್ರ ಸಣ್ಣಕ್ಕಿ ಅವರ 66ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಪಂ ಮಾಜಿ ಸದಸ್ಯ, ರಾಜ್ಯ ಕುರುಬರ ಸಂದ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕೌಜಲಗಿ ಜನರ ಸಹಕಾರ ಹಾಗೂ ಆಶೀರ್ವಾದದಿಂದ ನಾಲ್ಕು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಅಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯ ಮಾಡಿದ ತೃಪ್ತಿ ನನಗಿದೆ ಎಂದರು.

1995ರಲ್ಲಿ ಆರಂಭವಾದ ರಾಜಕೀಯ ಜೀವನ ಇಂದಿಗೂ ಯಶಸ್ವಿಯಾಗಿ ಸಾಗಿರಲು ಜನರ ಸಹಕಾರ ಬಹಳಷ್ಟಿದೆ. ಎಲ್ಲರ ಆಶೀರ್ವಾದ ನಿರಂತರವಾಗಿರಲೆಂದು ಆಶಿಸಿದರು.

ವಿಠ್ಠಲ ದೇವಋಸಿ, ಜಿಪಂ ಮಾಜಿ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಶಿವಾನಂದ ಲೋಕಣ್ಣವರ, ಬಸನಗೌಡ ಪಾಟೀಲ, ಲಕ್ಷ$್ಮಣ ಗಣಪ್ಪಗೋಳ, ಸಿದ್ಧಲಿಂಗ ಕಂಬಳಿ, ರಾಮಣ್ಣ ಈಟಿ, ವೆಂಕಟೇಶ ದಳವಾಯಿ, ತಮ್ಮಣ್ಣ ದೇವರ, ಸುಭಾಸ ವಂಟಗೋಡಿ, ವೀರಭದ್ರ ವಾಲಿ, ಬಸವರಾಜ ಲೋಕಣ್ಣವರ, ಪಿಎಸ್​ಐ ಆನಂದ, ನೀಲಪ್ಪ ಕೇವಟ್ಟಿ, ರಾಯಪ್ಪ ಬಳೋಲದಾರ, ಮಂಜುನಾಥ ಸಣ್ಣಕ್ಕಿ, ಶಂಕರ ಜೊತೆಣ್ಣವರ, ಹಾಸಿಮ್​ ನಗಾರ್ಜಿ. ರಮೇಶ ಬುದ್ನಿ, ಮಾಲತೇಶ ಸಣ್ಣಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net