

ಮಂಗಳೂರು : ಹಿರಿಯ ಕಲಾವಿದ ರಾಜೇಂದ್ರ ಕೇದಿಗೆ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದರು. ಹಲವು ದಶಕದಿಂದ ು ಚಿತ್ರಕಲೆ, ಕ್ಯುರೇಟೋರಿಯಲ್ ಕೆಲಸ, ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಕ್ಷೇತ್ರಗಳಲ್ಲಿ ಅವರು ಗಮನಾರ್ಹ ಮಾಡಿದ್ದಾರೆ. 25ಕ್ಕೂ ಹೆಚ್ಚು ಕಲಾ ಪ್ರದರ್ಶನಗಳನ್ನು ನಡೆಸಿದ ಸ್ವ ಚಿಂತನಾ ವರ್ಣಚಿತ್ರಕಾರರು. ವೃತ್ತಿಪರ ಕಲಾವಿದರಾಗಿರುವ ಕೇದಿಹೆ ಕವಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಮೂಲತಃ ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದವರಾಗಿದ್ದು, ಕೇದಿಗೆ ಭಾಸ್ಕರ ರಾವ್- ಲಕ್ಷ್ಮೀ. ಬಿ.ರಾವ್ ದಂಪತಿ ಪುತ್ರ.