ರಾಜೇಂದ್ರ ಅಧ್ಯಕ್ಷ, ಬಸನಗೌಡ ಉಪಾಧ್ಯಕ್ಷ

10Huk2
Published on

ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮ್ ಸಂಗಮ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾಜೇಂದ್ರ ಪಾಟೀಲ, ಉಪಾಧ್ಯಕ್ಷರಾಗಿ ಬಸಗೌಡ ಪಾಟೀಲ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಆರ್.ಪಿ.ಪಾಟೀಲ ಘೋಷಿಸಿದರು.

ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ಅಧಿಕ ಪ್ರಮಾಣದಲ್ಲಿ ಕಾರ್ಖಾನೆಗೆ ಕಬ್ಬು ಕಳುಹಿಸಿ ಸಹಕರಿಸಬೇಕು. ಮುಂಬರುವ ದಿನಗಳಲ್ಲಿ ಎಥೆನಾಲ್ ಮತ್ತು ಉಪ ಉತ್ಪನ್ನಗಳನ್ನು ತಯಾರಿಸಿ ಕಾರ್ಖಾನೆಗೆ ಹೆಚ್ಚು ಆದಾಯ ಬರುವಂತೆ ಕ್ರಮ ಕೈಗೊಳ್ಳಲಾಗುವುದು. ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಶಶಿಕಾಂತ ನಾಯಿಕ, ಸಿದ್ದಲಿಂಗಪ್ಪ ಸಿದ್ಧಗೌಡರ, ಸುನೀಲ ಪರ್ವತರಾವ, ಸಂಪತ್ ಬಾಂದುರ್ಗೆ, ರಾಜೇಶ್ವರಿ ಕವಟಗಿಮಠ, ಸಂಗೀತ ಕರಗುಪ್ಪಿ, ಅರ್ಜುನನಾಯ್ಕ ಪಾಟೀಲ, ಸುಭಾಷ ಪಾಟೀಲ, ಮಹಾದೇವ ಶಿಂಗೆ, ಶಿವಪ್ಪ ಘಸ್ತಿ, ಶಾಂತಾದೇವಿ ತವಗಮಠ, ಅಮರನಾಥ ಮಹಾಜನಶೆಟ್ಟಿ, ವ್ಯವಸ್ಥಾಪಕ ನಿದೇರ್ಶಕ ಎಸ್.ಎಸ್.ಪೂಜೇರಿ, ಕಾರ್ಯಾಲಯ ಅಧಿಕ್ಷಕ ಅಣ್ಣಪ್ಪ ಅಕ್ಕತಂಗೇರಹಾಳ, ಮುಖಂಡರಾದ ಬಂಡು ಹತನೂರೆ, ಕುನಾಲ ಪಾಟೀಲ, ಪವನ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net