ರಾಜೀವ್ ಗಾಂಧಿ ಕನಸು ನನಸು ಮಾಡಲು ಶ್ರಮಿಸಿ

VMS 20-3
Published on

ವಿಜಯಪುರ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಕಂಡ ಕನಸು ನನಸುಮಾಡುವಲ್ಲಿ ನಾವೆಲ್ಲ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಎಐಸಿಸಿ ಸದಸ್ಯರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಶ್ರೀದೇವಿ ಉತ್ಲಾಸರ ಹೇಳಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಪರಿವರ್ತನೆ ಹರಿಕಾರ ದೇವರಾಜ ಅರಸರ ಜನ್ಮ ದಿನಾಚರಣೆ ನಿಮಿತ್ತ ಗುರುವಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ವಿವಿಧ ಬಡಾವಣೆಗಳಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನ, ಟೆಲಿಕಾಂ ಕ್ರಾಂತಿ, ಪಂಚಾಯತ್ ರಾಜ್, ಮತದಾನದ ವಯಸ್ಸಿನ ಇಳಿಕೆ ಸೇರಿದಂತೆ ಮಹತ್ತರ ಬಲಿಷ್ಟ ಭಾರತವನ್ನು ಕಟ್ಟುವಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಹಳಷ್ಟು ಶ್ರಮಿಸಿದ್ದಾರೆ ಎಂದರು.
ಭೂ ಸುಧಾರಣೆ ಕಾಯ್ದೆ, ಉಳುವವನೆ ಭೂಮಿ ಒಡೆಯ ಎನ್ನುವ ಮಹತ್ತರ ಕಾನೂನು ಜಾರಿಗೆ ತರುವ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾರ್ಯ ಶ್ಲಾಘನೀಯ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಮುನೀರ್ ಕಾಲೇಬಾಗ, ಅನೀತಾ ಭಜಂತ್ರಿ, ಶ್ವೇತಾ ಜಲಜಿ, ಸವಿತಾ ನಾಟೀಕಾರ ಪದಾಧಿಕಾರಿಗಳಾದ ಆಸೀಫ್ ಪಟೇಲ್, ಇಮಾನ್ ಅಜೀಂ, ಸೋಹೆಲ್ ಶೇಖ, ರಿಯಾಜ್ ಹಂಗರಗಿ, ಸಮೀರ್ ಮುಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net