ನೈಋತ್ಯ ರೈಲ್ವೆಗೆ ರಾಜಧಾನಿ ಎಕ್ಸ್​ಪ್ರೆಸ್​ನಿಂದ ಹೆಚ್ಚು ಆದಾಯ

Train_2
Published on

ಬೆಂಗಳೂರು: ಬೆಂಗಳೂರು-ದೆಹಲಿಯ ನಿಜಾಮುದ್ದೀನ್​ ನಡುವೆ ಸಂಚರಿಸುವ ರಾಜಧಾನಿ ಎಕ್ಸ್​ಪ್ರೆಸ್​ ರೈಲು 2019-20ನೇ ಸಾಲಿನಲ್ಲಿ ನೈಋತ್ಯ ರೈಲ್ವೆಗೆ ಅತಿಹೆಚ್ಚು ಆದಾಯ ತಂದುಕೊಟ್ಟ ರೈಲಾಗಿದೆ.

ಕಳೆದ ವರ್ಷ ನೈಋತ್ಯ ರೈಲ್ವೆಗೆ 10 ರೈಲುಗಳಿಂದ 609.36 ಕೋಟಿ ರೂ. ಆದಾಯ ಬಂದಿದೆ. ಅದರಲ್ಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಿಂದಲೇ 137.31 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಉಳಿದಂತೆ ಸಂಮಿತ್ರ ಎಕ್ಸ್​ಪ್ರೆಸ್​ ರೈಲಿನಿಂದ 73.92 ಕೋಟಿ ರೂ., ಕರ್ನಾಟಕ ಎಕ್ಸ್​ಪ್ರೆಸ್​ನಿಂದ 72.62 ಕೋಟಿ ರೂ., ಡುರಿನಟೋ ಎಕ್ಸ್​ಪ್ರೆಸ್​ನಿಂದ 62.70 ಕೋಟಿ ರೂ., ಯಶವಂತಪುರ&ಹೌರಾ ಎಕ್ಸ್​ಪ್ರೆಸ್​ನಿಂದ 62.21 ಕೋಟಿ ರೂ., ಗೋವಾ ಎಕ್ಸ್​ಪ್ರೆಸ್​ನಿಂದ 42.49 ಕೋಟಿ ರೂ., ಅಗರ್ತಲಾ ಹಮ್​ಸರ್​ ರೈಲಿನಿಂದ 41.13 ಕೋಟಿ ರೂ., ಸಂಪರ್ಕ ಕ್ರಾಂತಿ ರೈಲಿನಿಂದ 39.52 ಕೋಟಿ ರೂ., ಪ್ರಶಾಂತಿ ಎಕ್ಸ್​ಪ್ರೆಸ್​ನಿಂದ 39.4 ಹಾಗೂ ಗುವಾಹಟಿ ಎಕ್ಸ್​ಪ್ರೆಸ್​ ರೈಲಿನಿಂದ 38.42 ಕೋಟಿ ರೂ. ಆದಾಯ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net