ರಾಜವಾಳ ಗ್ರಾಮದಲ್ಲಿ ಚಿರತೆ ಮರಿ ರಕ್ಷಣೆ

Hadagali Leoprad cub
ರಾಜವಾಳ ಗ್ರಾಮಸ್ಥರು ಶನಿವಾರ ರಾತ್ರಿ ಚಿರತೆಮರಿಯನ್ನು ಬಲೆ ಹಾಕಿ ಹಿಡಿದಿರುವುದು.
Published on

ಹೂವಿನಹಡಗಲಿ: ತಾಲೂಕಿನ ರಾಜವಾಳ ಗ್ರಾಮದಲ್ಲಿ ಶನಿವಾರ ಕಾಣಿಸಿಕೊಂಡ ಚಿರತೆಮರಿಯನ್ನು ಗ್ರಾಮಸ್ಥರು ರಕ್ಷಿಸಿ ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಶನಿವಾರ ರಾತ್ರಿ ಗ್ರಾಮದ ಅಜ್ಜಪ್ಪ ಎಂಬುವವರು ಜಮೀನಿನಿಂದ ಮನೆೆಗೆ ಹೊರಟಿರುವಾಗ ಯಾವುದೋ ಪ್ರಾಣಿ ಕೂಗಾಡುವ ಶಬ್ಧ ಕೇಳಿಸಿದೆ. ಅತ್ತ ಅಜ್ಜಪ್ಪ ತೆರಳಿ ನೋಡಿದಾಗ, ಚಿರತೆಮರಿ ಗಾಬರಿಗೊಂಡು ಊರಿನ ಓಡಿದೆ.ಇದನ್ನು ಗಮನಿಸಿದ ಕೆಲ ಗ್ರಾಮಸ್ಥರು ಚಿರತೆಮರಿ ಹಿಡಿಯಲು ಬಲೆ ತಂದಿದ್ದಾರೆ. ಕತ್ತಲಿನಲ್ಲಿ ಮರವನ್ನೇರಿದ್ದ ಚಿರತೆಮರಿಯನ್ನು ರಕ್ಷಿಸಿ ಪಟ್ಟಣಕ್ಕೆ ತಂದಿದ್ದಾರೆ.

ಬೆಳಗಿನ ಜಾವ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಮತ್ತು ಸಿಬ್ಬಂದಿ ತೆರಳಿ ವಶಕ್ಕೆ ಪಡೆದಿದ್ದಾರೆ. ಸುಮಾರು ನಾಲ್ಕು ತಿಂಗಳ ಹೆಣ್ಣು ಚಿರತೆಮರಿಯಾಗಿದ್ದರಿಂದ ರಾತ್ರಿ ಜನರನ್ನು ನೋಡಿ ಗಾಬರಿಗೊಂಡಿದ್ದು, ತಾಯಿಯಿಂದ ದೂರವಾದ ಕಾರಣ ದೇಹದಲ್ಲಿ ಶಕ್ತಿ ಕಡಿಮೆಯಾಗಿದೆ. ಇಲಾಖೆ ಸಿಬ್ಬಂದಿ ಮತ್ತು ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಲಾಗುತ್ತದೆ ಎಂದು ರೇಣುಕಮ್ಮ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net