ಜನರನ್ನು ರಂಜಿಸಿದ ಭರತನಾಟ್ಯ: ಮೂರು ದಿನದ ರಜತಮಹೋತ್ಸವಕ್ಕೆ ತೆರೆ

22_08_Mdy_04(Gurudevothsava)
Published on

ಮಂಡ್ಯ: ಗುರುದೇವ ಲಲಿತಕಲಾ ಅಕಾಡೆಮಿಯ 25ನೇ ವರ್ಷದ ರಜತಮಹೋತ್ಸವದ ಅಂಗವಾಗಿ ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನದ ಗುರುದೇವೋತ್ಸವ ಭಾನುವಾರ ತೆರೆ ಕಂಡಿತು. ಇನ್ನು ರಾಷ್ಟ್ರೀಯ ನೃತ್ಯೋತ್ಸವ ಮತ್ತು ಸ್ಪರ್ಧೆಯು ಭರತನಾಟ್ಯ ಪ್ರಿಯರನ್ನು ರಂಜಿಸಿತು.
ಮೂರು ದಿನವೂ ವಿವಿಧ ತಂಡಗಳು ಭರತನಾಟ್ಯ ಪ್ರದರ್ಶನ ನೀಡಿದವು. ಇವು ಜನರ ಮನಸೂರೆಗೊಂಡವು. ಅಂತಿಮ ದಿನವಾದ ಭಾನುವಾರ ಗುರುದೇವ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಚಲನಚಿತ್ರ ನಟಿ ಪಾಯಲ್ ರಾಧಾಕೃಷ್ಣ, ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಭಾಗವಹಿಸಿದ್ದರು.
ವೈದ್ಯ ಡಾ.ಬಿ.ಎಸ್.ಕಕ್ಕಿಲಾಯ, ಕಥಕ್ ಕಲಾವಿದೆ ಚೇತನ, ಸಾಹಿತಿ ಡಾ.ಎಸ್.ಶ್ರೀನಿವಾಸಶೆಟ್ಟಿ, ಲಕ್ಷ್ಮೀನಾರಾಯಣ ಕಜೆಗದ್ದೆ, ಆಗಮಿಕ ವಿದ್ವಾನ್ ಎಸ್.ಟಿ.ಶಂಕರಾನಂದ ಜೋಯಿಸ್, ಉದ್ಯಮಿ ಜಗನ್ನಾಥಶೆಟ್ಟಿ, ಜಾನಪದ ಕಲಾವಿದ ಕೆ.ಎಂ.ಕೃಷ್ಣೇಗೌಡ, ಮೈಸೂರು ಮಾಯಕಾರ ಗುರುಕುಲ ಸಂಸ್ಥಾಪಕ ಡಾ.ಮೂಗೂರು ಮಧುದೀಕ್ಷಿತ್ ಗುರೂಜಿ, ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ, ಜೆಎಸ್‌ಎಸ್ ಸ್ನಾತಕೋತ್ತರ ಸಹ ಪ್ರಾಧ್ಯಾಪಕಿ ಡಾ.ಕುಮುದಿನಿ ಅಚ್ಚಿ, ಲಯನ್ ಜಿಲ್ಲಾ ಗವರ್ನರ್ ಸಂಯೋಜನೆ ಅಧಿಕಾರಿ ಬಿ.ಎಂ. ಅಪ್ಪಾಜಪ್ಪ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತೆಯೇ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net