ಬಸ್ತಿಮಠದಲ್ಲಿ ರಜತ ರಥೋತ್ಸವ ಸಂಭ್ರಮ

2 nrp 2
ಎನ್.ಆರ್.ಪುರದ ಬಸ್ತಿಮಠದಲ್ಲಿ ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ 1008 ಮಂತ್ರ ಪುಷ್ಪಾ ಶೋಡಶೋಪಚಾರ ನಡೆಯಿತು.
Published on

ಎನ್.ಆರ್.ಪುರ: ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಪೀಠಾಧಿಪತಿ ಶ್ರೀಲಕ್ಷ್ಮೀ ಸೇನಾ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ಯಾತ್ರಾ ಮಹೋತ್ಸವದ 3ನೇ ದಿನವಾದ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮ, ರಜತ ರಥೋತ್ಸವ ನಡೆಯಿತು.
ಮಂಗಳವಾರ ಬೆಳಗ್ಗೆ ಶ್ರೀಜ್ವಾಲಾಮಾಲಿನಿ ಕ್ಷೇತ್ರದಲ್ಲಿ ನಿತ್ಯ ವಿಧಿ ಸಹಿತ ಜ್ವಾಲಾಮಾಲಿನಿ ದೇವಿ ಆರಾಧನೆ, ಜ್ವಾಲಾಮಾಲಿನಿ ಅಮ್ಮನವರಿಗೆ ಉಯ್ಯಲೆ ಸೇವೆ, ಅಮ್ಮನವರಿಗೆ 1008 ಮಂತ್ರ ಪುಷ್ಪಾ ಶೋಡಶೋಪಚಾರ ಹಾಗೂ ಸಂಜೆ ರಜತ ರಥೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಬಸ್ತಿಮಠದ ಶ್ರೀಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಏ.3ರಂದು ಬಸ್ತಿಮಠದಲ್ಲಿ ನಿತ್ಯ ವಿಧಿ ಸಹಿತ ಮಹಾ ನೈವೇದ್ಯ ಪೂಜೆ, ರಥಾರೋಹಣಕ್ಕೆ ಶ್ರೀಜ್ವಾಲಾಮಾಲಿನಿ ಅಮ್ಮನವರ ಸನ್ನಿಧಿಯಲ್ಲಿ ಪ್ರಸಾದ ಬೇಡಿಕೆ, ರಥಾರೋಹಣ, ಸಮವಸರಣ ಪೂಜೆ ಮತ್ತು ಸಂಜೆ ರಾಜ ಬೀದಿಯಲ್ಲಿ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮಹಾ ರಥೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net