ರಾಯರಿಗೆ ರಜತ ರಥ ಸಮರ್ಪಣೆ

Mantralaya silver chariot
Published on

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನವೀಕೃತಗೊಂಡ ರಜತ ರಥವನ್ನು ಭಾನುವಾರ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ರಾಯರಿಗೆ ಸಮರ್ಪಣೆ ಮಾಡಿದರು. ರಜತ ರಥ ಹಳೆಯದಾಗಿದ್ದರಿಂದ ನೂರಾರು ಕೆಜಿ ಬೆಳ್ಳಿಯನ್ನು ಉಪಯೋಗಿಸಿ ನವೀಕೃತಗೊಳಿಸಲಾಗಿದೆ. ಶ್ರೀಗಳು ರಥದ ಕಳಸಕ್ಕೆ ಅಭಿಷೇಕ, ಪೂಜೆ ಹಾಗೂ ಆರತಿ ನೆರವೇರಿಸಿ ನವೀಕೃತ ರಥವನ್ನು ರಾಯರಿಗೆ ಸಮರ್ಪಿಸಿದರು. ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net