ಬಿ. ಎನ್. ವಾಸರೆಗೆ ರಜತ ರಂಗು ಪ್ರಶಸ್ತಿ ಪ್ರದಾನ

Award given
Published on

ದಾಂಡೇಲಿ: ಮಂಗಳೂರಿನ ಕಲ್ಲಚ್ಚು ಪ್ರಕಾಶನದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಎನ್. ವಾಸರೆ ಅವರಿಗೆ ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ರಜತ ರಂಗು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲ್ಲಚ್ಚು ಪ್ರಕಾಶನಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳೂರಿನ ಓಷನ್ ಪರ್ಲ್ ಸುಭಾಂಗಣದಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ವಿಶ್ರಾಂತ ಉಪ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಕಾರ್ಯಕ್ರಮ ಉದ್ಘಾಟಿಸಿದರು.

ಸಾಹಿತಿ ಪ್ರಭಾಕರ್ ನೀರಮಾರ್ಗರವರು ಕಲ್ಲಚ್ಚು ಮಹೇಶ್ ನಾಯಕ ಅವರ ಅನುಗೂಡುನು ಬಾ ಕೃತಿಯನ್ನು ಬಿಡುಗಡೆಗೊಳಿಸಿದರು. ಕುಂದಾಪುರದ ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯಿಸಿದರು. ಬೆಂಗಳೂರಿನ ಜಯಂತ್ ನಾಯಕ್, ಹಿರಿಯ ಸಾಹಿತಿ ಡಾ ಪ್ರಥ್ವಿರಾಜ್ ನಾಯಕ, ಡಾ. ಸ್ಮಿತಾ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

ಕಲ್ಲಚ್ಚು ಪ್ರಕಾಶನದ ಸಂಸ್ಥಾಪಕ ಮಹೇಶ್ ಆರ್. ನಾಯಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುಬ್ರಾಯ್ ಭಟ್ ನಿರೂಪಿಸಿದರು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net