ಮೂರನೇ ಮಾರಿಗುಡಿ ದೇವಸ್ಥಾನ ರಜತ ಗದ್ದುಗೆ ನಿರ್ಮಾಣ ಸಂಕಲ್ಪ

rajatha
ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಿಗೆ ರಜತ ಗದ್ದುಗೆ ಮತ್ತು ಮಂಟಪ ನಿರ್ಮಾಣದ ಬಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮುಷ್ಟಿ ಕಾಣಿಕೆ ಸಮರ್ಪಿಸಲಾಯಿತು.
Published on

ಪಡುಬಿದ್ರಿ: ಕಾಪು ಶ್ರೀ ಮೂರನೇ ಮಾರಿಯಮ್ಮ ದೇವಿಗೆ ರಜತ ಗದ್ದುಗೆ ಮತ್ತು ಮಂಟಪ ನಿರ್ಮಾಣದ ಬಗ್ಗೆ ಮಹತೋಭಾರ ಶ್ರೀ ಲಕ್ಷ್ಮೆಜನಾರ್ದನ ದೇವರ ಸನ್ನಿಧಾನದಲ್ಲಿ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಊರ ಪರವೂರ ಭಕ್ತರು ಮಂಗಳವಾರ ತುಳಸೀ ಅರ್ಚನೆ, ಕ್ಷೀರ ಪಾಯಸ ಸೇವೆ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಮುಷ್ಟಿ ಕಾಣಿಕೆ ಸಮರ್ಪಿಸಿದರು.

ದೇವಸ್ಥಾನದ ತಂತ್ರಿಗಳಾದ ಅನಂತರಾಮ ತಂತ್ರಿ ಕಲ್ಯಾ ಮಾರ್ಗದರ್ಶನದಲ್ಲಿ ಜ್ಯೋತಿಷ್ಯ ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲ್ಲಿ ಪ್ರಧಾನ ಅರ್ಚಕ ನಾರಾಯಣ ತಂತ್ರಿ, ಜನಾರ್ದನ ತಂತ್ರಿ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಹಿತ ಪೂಜಾ ವಿಧಾನ ನೆರವೇರಿಸಿ ಬೆಳ್ಳಿ ಸಮರ್ಪಣೆಗೆ ಚಾಲನೆ ನೀಡಲಾಯಿತು.

ಮಹತೋಭಾರ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ ಕಾಪು, ಸದಸ್ಯರಾದ ರವಿಕುಮಾರ್ ಮಂದಾರ, ಶಶಿಧರ್ ಸುವರ್ಣ ಉಳಿಯಾರಗೋಳಿ, ಸದಾನಂದ ಎ. ಸುವರ್ಣ ಪೊಲಿಪು, ಅಶ್ವಿನಿ ಬಂಗೇರ ಕಾಪು, ಶಾಂತಲತಾ ಎಸ್. ಶೆಟ್ಟಿ ಮಲ್ಲಾರು, ನಾಗರಾಜ್ ಎಸ್. ಮೂಳೂರು, ಶ್ರೀಕಾಂತ್ ಕಾಪು, ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶಶಿಧರ್ ಶೆಟ್ಟಿ ಎರ್ಮಾಳು, ಪ್ರಧಾನ ಕಾರ್ಯದರ್ಶಿ ಶ್ರೀಕರ ಶೆಟ್ಟಿ ಕಲ್ಯಾ, ಮಾಜಿ ಆಡಳಿತ ಮೊಕ್ತೇಸರ ಮೋಹನ್ ಬಂಗೇರ ಕಾಪು, ಹೊಸ ಮಾರಿಗುಡಿ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಮಾರಿಯಮ್ಮ ದೇವಿ ದರ್ಶನ ಪಾತ್ರಿ ಗಿರೀಶ್ ಪಾತ್ರಿ, ಪ್ರಮುಖರಾದ ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ರತ್ನಾಕರ ಶೆಟ್ಟಿ, ಸಂದೀಪ್ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಅನಿಲ್‌ಕುಮಾರ್, ರಮೇಶ್ ಶೆಟ್ಟಿ, ಮನೋಹರ್ ರಾವ್ ಕಲ್ಯಾ, ಶೇಖರ್ ಕೋಟ್ಯಾನ್, ಪ್ರಬಂಧಕ ದಿವಾಕರ್ ಕಾಪು, ಸ್ಥಳವಂದಿಗರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net