ರಾಜಸ್ಥಾನಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ

05 GKK-1-Web
ಗೋಕಾಕ ನಗರದಲ್ಲಿ ಕಳಪೆ, ಕಲಬೆರೆಕೆ ಸಾಮಗ್ರಿ ಮಾರಾಟ ಮಾಡುತ್ತಿರುವ ರಾಜಸ್ಥಾನಿ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿಎಸ್‌ಎಸ್ ಹಾಗೂ ಕಿರಾಣಿ ಮತ್ತು ಹೋಲ್‌ಸೇಲ್ ಕಿರಾಣಿ ವ್ಯಾಪಾರಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಬಾಳೇಶ ಸಂತವ್ವಗೋಳ, ಲಕ್ಷ್ಮಣ ತೆಳಗಡೆ, ಬಸವರಾಜ ಕಾಡಾಪುರ, ಅಲ್ಲಾಭಕ್ಷ ಮುಲ್ಲಾ, ಕಾಡಪ್ಪ ಮೇಸಿ, ಮಾರುತಿ ಕರಬಣ್ಣವರ ಇದ್ದರು.
Published on

ಗೋಕಾಕ: ನಗರದಲ್ಲಿ ಕಳಪೆ ಹಾಗೂ ಕಲಬೆರೆಕೆ ಸಾಮಾಗ್ರಿ ಮಾರಾಟ ಮಾಡುತ್ತಿರುವ ರಾಜಸ್ಥಾನಿ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿಎಸ್‌ಎಸ್ ಹಾಗೂ ಇಲ್ಲಿಯ ಕಿರಾಣಿ ಮತ್ತು ಹೋಲ್‌ಸೇಲ್ ಕಿರಾಣಿ ವ್ಯಾಪಾರಸ್ಥರು ಸೋಮವಾರ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೊಳ ಅವರಿಗೆ ಮನವಿ ಸಲ್ಲಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಡಿಎಸ್‌ಎಸ್ ಪದಾಧಿಕಾರಿಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರು ರಾಜಸ್ಥಾನಿ ವ್ಯಾಪಾರಸ್ಥರ ವಿರುದ್ಧ ಘೋಷಣೆ ಕೂಗಿದರು. ಇತ್ತೀಚೆಗೆ ನಗರಕ್ಕೆ ಆಗಮಿಸಿರುವ ಅವರು ಸಾರ್ವಜನಿಕರಿಗೆ ಕಳಪೆ ಹಾಗೂ ಕಲಬೆರೆಕೆ ಸಾಮಗ್ರಿ ಮಾರಾಟ ಮಾಡುತ್ತಿದ್ದಾರೆ. ಬಿಲ್ ನೀಡದೇ ವಸ್ತು ಮಾರಾಟ ಮಾಡಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಕೂಡಲೇ ರಾಜಸ್ಥಾನಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಡಿಎಸ್‌ಎಸ್‌ನ ರಮೇಶ ಮಾದರ, ಸತ್ತೆಪ್ಪ ಕರವಾಡಿ, ಬಾಳೇಶ ಸಂತವ್ವಗೋಳ, ಲಕ್ಷ್ಮಣ ತೆಳಗಡೆ, ಬಸವರಾಜ ಕಾಡಾಪುರ, ಅಲ್ಲಾಭಕ್ಷ ಮುಲ್ಲಾ, ಕಾಡಪ್ಪ ಮೇಸಿ, ಮಾರುತಿ ಕರಬಣ್ಣವರ, ವಿಠ್ಠಲ ಸಣ್ಣಕ್ಕಿ, ಗಣಪತಿ ಈಳಿಗೇರ, ಪ್ರಮೋದ ಅಂಗಡಿ, ಮಹೇಶ ಪಾಟೀಲ, ಆನಂದ ತೇಲಿ, ಎ.ಕೆ.ಕೊಟ್ರಶೆಟ್ಟಿ, ಪ್ರವೀಣ ಅಂಗಡಿ, ಶ್ರೇಯಸ ಕಿತ್ತೂರ, ಸೂರಜ ಮುನ್ನೊಳ್ಳಿಮಠ ಇದ್ದರು.

ಘಟಪ್ರಭಾ ವರದಿ: ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ವ್ಯಾಪಾರಸ್ಥರು ಪಟ್ಟಣದಲ್ಲಿ ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಅರ್ಜುನ ಗಂಡವ್ವಗೋಳ ಆಗ್ರಹಿಸಿದರು. ಸೋಮವಾರ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ರಾಜಸ್ಥಾನಿ ವ್ಯಾಪಾರಿಗಳು ವಿರುದ್ಧ ವಿವಿಧ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಪ್ರತಿಭಟನಾಕಾರರು ಅರಬಾವಿ ಉಪತಹಸೀಲ್ದಾರ್ ಎಲ್.ಎಚ್.ಭೋವಿ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಚೌಕಶಿ, ವೀರಣ್ಣ ಸಂಗಮನವರ, ಭರಮು ಗಾಡಿವಡ್ಡರ, ಕೃಷ್ಣಾ ಗಂಡವ್ವಗೋಳ, ಶಂಕರ ವಾಘ, ರಘು ಚಿಂಚಲಿ, ಕಲ್ಲಪ್ಪ ವಗ್ಗರ, ಈಶ್ವರ ನಡುವಿನಮನಿ, ಮಾರುತಿ ಮಾದರ, ಸಂತೋಷ ತೆಳಗಡೆ, ಬಸವರಾಜ ಎಸ್., ಮಾರುತಿ ಕಳ್ಳಿಮನಿ, ಕುಮಾರ ತೆಳಗಡೆ, ಎಂ.ಆರ್.ಗೋಕಾಕ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net