ರಾಜಸ್ಥಾನ ಸಂಸದ ಉಮ್ಮೆದರಾಮ್ ಹುಬ್ಬಳ್ಳಿಗೆ

New Ummedaram New
Published on

ಹುಬ್ಬಳ್ಳಿ : ರಾಜಸ್ಥಾನದ ಬಾಡಮೇರ್ ಜೈಸಲ್ಮೇರ್ ಬಾಲೊತರಾದ ಸಂಸದ ಉಮ್ಮೆದರಾಮ್ ಬೆನ್ನಿವಾಲ್ ಅವರು ಫೆ. 26ರಂದು ನಗರಕ್ಕೆ ಆಗಮಿಸಲಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಕೇಶ್ವಾಪುರದ ಆಜಾದ ಕಾಲನಿಯ ಪತಂಜಲಿ ರಾಜ್ಯ ಕಾರ್ಯುಲಯದಲ್ಲಿ ಆಯೋಜಿಸಿರುವ ಮಹಾ ಶಿವರಾತ್ರಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಹುಬ್ಬಳ್ಳಿಯಿಂದ ಹೊರಟು ಕಿಷ್ಕಿಂದಾ ಅಂಜನಾದ್ರಿಯ ಪಂಪಾ ಸರೋವರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ 108 ಹೋಮ ಕುಂಡಗಳ ಮಹಾ ಮೃತ್ಯುಂಜಯ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಬಳಿಕ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿನ ಮಹಾಶಿವರಾತ್ರಿ ಜಾಗರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net