ರಾಜಸ್ಥಾನಿ ವ್ಯಾಪಾರಸ್ಥರಿಗೆ ಅನುಮತಿ ಬೇಡ

1
ನಾಗರಮುನ್ನೋಳಿಯಲ್ಲಿ ಹೊರ ರಾಜ್ಯದ ರಾಜಸ್ಥಾನಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಗ್ರಾಮದ ವರ್ತಕರ ಸಂಘದಿಂದ ಪಿಡಿಒ ಆಶೀಫ್ ಪಠಾಣ ಅವರಿಗೆ ಮನವಿ ಸಲ್ಲಿಸಿದರು. ಸುಭಾಷ ಕೊಟಬಾಗಿ, ಸಿದಪ್ಪ ಮರ‌್ಯಾಯಿ, ಶಿವಪುತ್ರ ಮನಗೂಳಿ, ಗುರಲಿಂಗ ಕುಂಬಾರ, ಸದಾಶಿವ ಮಠದ ಇತರರು ಇದ್ದರು.
Published on

ನಾಗರಮುನ್ನೋಳಿ: ಹೊರ ರಾಜ್ಯದಿಂದ ಬಂದು ಗ್ರಾಮದಲ್ಲಿ ವ್ಯಾಪಾರ ವಹಿವಾಟು ಮಾಡಲು ಬರುವ ರಾಜಸ್ಥಾನಿ ವ್ಯಾಪಾಸ್ಥರಿಗೆ ಗ್ರಾಪಂ ಆಡಳಿತ ಮಂಡಳಿ ಅನುಮತಿ ನೀಡಬಾರದು ಎಂದು ಗ್ರಾಮದ ವರ್ತಕರ ಸಂಘದ ಅಧ್ಯಕ್ಷ ಸುಭಾಷ ಕೊಟಬಾಗಿ ಆಗ್ರಹಿಸಿದರು.

ಗ್ರಾಪಂ ಕಾರ್ಯಾಲಯದಲ್ಲಿ ಪಿಡಿಒ ಆಸೀಫ್ ಪಠಾಣ್ ಅವರಿಗೆ ಶನಿವಾರ ಮನವಿ ಸಲ್ಲಿಸಿ ಮಾತನಾಡಿ, ರಾಜಸ್ಥಾನಿ ವ್ಯಾಪಾರಿಗಳ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗುತ್ತದೆ. ರಾಜಸ್ಥಾನಿ ವ್ಯಾಪಾಸ್ಥರಿಗೆ ಯಾವುದೆ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಿಡಿಒ ಆಸೀಫ್ ಪಠಾಣ್ ಮಾತನಾಡಿ, ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ, ಶಿವಪುತ್ರ ಮನಗೂಳಿ, ಗುರಲಿಂಗ ಕುಂಬಾರ, ಸದಾಶಿವ ಮಠದ, ಜ್ಯೋತೆಪ್ಪ ಖಗನ್ನವರ, ರಾಘವೇಂದ್ರ ಬಡಿಗೇರ, ಚಿದಾನಂದ ಕಾಳನ್ನವರ, ಶಂಕರ ಬಸಗೌಡನ್ನವರ, ಬಸು ಯಾದಗೂಡೆ, ರಾಜು ಚೌಹಾಣ, ಇಮಾಮ್ ಜಮಾದಾರ, ಸಿದಪ್ಪ ಪಾಗದವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net