ಹುಬ್ಬಳ್ಳಿ: ಇಲ್ಲಿಯ ಆಲ್ ಕರ್ನಾಟಕ ರಾಜಸ್ಥಾನಿ ಯೂಥ್ ಫೆಡರೇಶನ್ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭ ಜೂ. 30ರಂದು ಸಂಜೆ 4.30ಕ್ಕೆ ಕೇಶ್ವಾಪುರದ ಎಸ್.ಟಿ. ಭಂಡಾರಿ ಸಭಾಗೃಹದಲ್ಲಿ ಏರ್ಪಡಿಸಲಾಗಿದೆ.
ಫೆಡರೇಶನ್ ಅಧ್ಯಕ್ಷ ಪ್ರಕಾಶ ಬಾಣಾ, ಕಾರ್ಯದರ್ಶಿ ಮಗರಾಜ ಭಾಲ್ಗಟ್, ಸಂಚಾಲಕರಾದ ಕೇಸರಿಚಂದ, ಮಹಾವೀರ ಎಸ್. ಅವರು ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಳ್ಳುವರು.
ಶಾಸಕ ಮಹೇಶ ಟೆಂಗಿನಕಾಯಿ, ಜೈನ್ ಮರುಧರ ಸಂದ ಅಧ್ಯಕ್ಷ ಜಯಂತಿಲಾಲ ಪರಮಾರ, ವರ್ಧಮಾನ ಸ್ಥಾನಕವಾಸಿ ಜೈನ್ ಶ್ರಾವಕ ಸಂದ ಅಧ್ಯಕ್ಷ ಉಕಚಂದಜೀ ಬಾಣಾ, ಜೈನ್ ಶ್ವೇತಾಂಬರ ತೇರಾಪಂತಿ ಸಭಾ ಅಧ್ಯಕ್ಷ ಪಾರಸಮಲ್ ಬನ್ಸಾಲಿ, ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅತಿಥಿಗಳಾಗಿ ಪಾಲ್ಗೊಳ್ಳುವರು.