

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಮುಟ್ಟಲು ರಾಜಸ್ಥಾನಿ ಸಮಾಜದ ಬೆಂಬಲವೂ ಅಗತ್ಯ ಎಂದು ಕೇಂದ್ರ ಕಾನೂನು ಸಚಿವ ಅರ್ಜುನರಾಮ ಮೇಘವಾಲ್ ಹೇಳಿದರು.
ರಾಜಸ್ಥಾನಿ ಸಮಾಜದ ಯುವ ಉದ್ಯಮಿಗಳ ಜತೆ ಸಂವಾದ ನಡೆಸಿದ ಅವರು, ಕಳೆದ 10 ವರ್ಷಗಳ ಬಿಜೆಪಿ ಸರ್ಕಾರದ ಸಾಧನೆಯನ್ನು ವಿವರಿಸಿದರು.
ಯುವ ಉದ್ಯಮಿ ವಿನೋದಕುಮಾರ ಪಟವಾ ಮಾತನಾಡಿ, ಹುಬ್ಬಳ್ಳಿಯಿಂದ ಮುಂಬೈ, ಅಹಮದಾಬಾದ್ ಹಾಗೂ ಜೋಧಪುರಗೆ ವಿಮಾನ ಸಂಪರ್ಕ ಸೇವೆ ಹಾಗೂ ಹುಬ್ಬಳ್ಳಿಯಿಂದ ಜೋಧಪುರ ಮತ್ತು ಬರಮಾರ್ಗೆ ಹೆಚ್ಚುವರಿ ರೈಲು ಸಂಚಾರ ಸೇವೆ ಒದಗಿಸುವಂತೆ ಮನವಿ ಮಾಡಿದರು.
ಮಹಾನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಅಂಕೇಶ ಜೈನ್, ಮಂಟು ಜೈನ್, ರಾಕೇಶ ಕಟಾರಿಯಾ, ಸಂದೀಪ ಪಾಲ್ಗೋತ, ದೇವೆಂದ್ರ ಸಿಂಗ್, ಹೇಮರತನ್ ಸಂಘಿ, ಅಕ್ಷಯ ಮೊಮಾಯ, ಅಂಕಿಶ ರಾಠೋಡ, ದೀಪಕ ಕಟಾರಿಯಾ, ನಿತೀನ ಜೈನ್, ಇತರರು ಇದ್ದರು.