

ಕಲಬುರಗಿ: ಸೇಡಂ ತಾಲೂಕಿನ ಮಳಖೇಡದಲ್ಲಿರುವ ರಾಜಶ್ರೀ ಅಲ್ಟಾçಟೆಕ್ ಸಿಮೆಂಟ್ ಕಂಪನಿಯಲ್ಲಿನ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ, ಸೌಲಭ್ಯಕ್ಕೆ ಆಗ್ರಹಿಸಿ ಜ.17ರಂದು ನಗರದ ಕಾರ್ಮಿಕರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎಂ.ಸಂದೇಶ ತಿಳಿಸಿದರು.
ಕಂಪನಿಯ ಪ್ಯಾಕಿಂಗ್ ಪ್ಲಾಂಟ್‌ನಲ್ಲಿ ಸುಮಾರು ೮೦೦ ಕಾರ್ಮಿಕರನ್ನು ಎಂಟು ಗಂಟೆಗಿಂತ ಹೆಚ್ಚು ದುಡಿಸಿಕೊಳ್ಳುತ್ತಿದ್ದು, ಆನ್‌ಕಾಲ್ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನಿಷ್ಠ ವೇತನ ನೀಡುತ್ತಿಲ್ಲ, ಪಿಎಫ್ ಪಾವತಿಸುತ್ತಿಲ್ಲ. ಗುತ್ತಿಗೆ ಏಜೆನ್ಸಿಯವರಾದ ಅರ್ಜುನ ರೋಡ್‌ವೇಸ್, ಮಹಾರಾಜ ಗ್ರೂಪ್ ಏಜೆನ್ಸಿಯವರು ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ್ದಾರೆ. ಈ ಕುರಿತು ಪ್ರಶ್ನಿಸಿದ ಕಾರ್ಮಿಕರನ್ನು ಬೆದರಿಸಲಾಗುತ್ತಿದೆ. ಆದ್ದರಿಂದ ಹೋರಾಟ ಮಾಡುತ್ತಿದ್ದು, ಕಾಲಿಂಗ್ ಡ್ಯೂಟಿ ರದ್ದುಪಡಿಸಬೇಕು, ಹೆಚ್ಚುವರಿ ಕೆಲಸಕ್ಕೆ ವೇತನ ನೀಡಬೇಕು, ಇಎಸ್‌ಐ, ಪಿಎಫ್, ಬೋನಸ್, ಗ್ರಾÈಚುಟಿ, ಡಿಎ ಸೇರಿ ಎಲ್ಲವೂ ನೀಡಬೇಕು. ಶಿಫ್ಟ್ನಲ್ಲಿ ಕೆಲಸ ನೀಡಬೇಕು, ಊಟಕ್ಕೆ ಗಂಟೆ ಸಮಯಾವಕಾಶ ನೀಡಬೇಕು, ಜೀವನ ಹಾನಿಯಾದರೆ ಚಿಕಿತ್ಸೆಗೆ ಅವಕಾಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದರು.
ಕಾರ್ಮಿಕರ ಬೇಡಿಕೆ ಬಗ್ಗೆ ಕಂಪನಿ ಎದುರು ಹೋರಾಡದಂತೆ ಕಂಪನಿಯವರು ಕೋರ್ಟ್ನಿಂದ ತಡೆಯಾಜ್ಞೆ ತಂದು, ಸಂಘಟನೆಗೆ ನೋಟಿಸ್ ನೀಡಿದ್ದಾರೆ. ಆದ್ದರಿಂದ ಕಾರ್ಮಿಕರ ಕಚೇರಿ ಎದುರು ಹೋರಾಟ ಮಾಡುತ್ತಿz್ದೆÃವೆ. ಕೋರ್ಟ್ಗೆ ಹೋಗಲಾಗುವುದು ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಬುದ್ಧೇಶ ಸಿಂಗೆ, ಉಪಾಧ್ಯಕ್ಷ ಭಾಗೇಶ, ಎನ್.ಕೆ.ಅರ್ಜುನ, ಸಂಜಯ ರಾಜ, ಮಲ್ಲಿಕಾರ್ಜುನ ಹಲಕಟ್ಟಿ, ಚಿದಾನಂದ, ಕುಂಜಲ್ ಕೆ. ಮಲ್ಲಿಕಾರ್ಜುನ ಹಲಕಟ್ಟಿ, ಧರ್ಮೇಂದ್ರ ಇತರರಿದ್ದರು.