ಜನೋಪಯೋಗಿ ಕೆಲಸ ಮಾಡಲು ಸಲಹೆ

6hbd3
Published on

ಹುಮನಾಬಾದ್​: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನೂತನ ಸಹಾಯಕ ಆಯುಕ್ತರು ಉತ್ತಮ ಆಡಳಿತ ನೀಡಿ ಜನೋಪಕಾರಿ ಕೆಲಸ ಮಾಡುವಂತೆ ಮಾಜಿ ಸಚಿವ ರಾಜಶೇಖರ ಪಾಟೀಲ್​ ಸಲಹೆ ನೀಡಿದರು. ಪಟ್ಟಣದ ನಿವಾಸದಲ್ಲಿ ಭಾನುವಾರ ಬಸವಕಲ್ಯಾಣ ನೂತನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ ಕುದ್ರಿ ಅವರು ಭೇಟಿಯಾಗಿ ಸನ್ಮಾನಿಸಿದ ಗೌರವಿಸಿದ ಸಂದರ್ಭದಲ್ಲಿ, ಮಾತನಾ, ಉತ್ತಮ ರೀತಿಯಿಂದ ಕೆಲಸ ನಿರ್ವಹಿಸಿಕೊಂಡು ಹೋಗುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲರಿಗೂ ನೂತನ ಆಯುಕ್ತರು ಹೂಗುಚ್ಛ ನೀಡಿ ಸನ್ಮಾನಿಸಿ ಗೌರವಿಸಿದರು. ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್​, ಟಿಎಪಿಸಿಎಮ್ ಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್​ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net