

ಹುಮನಾಬಾದ್: ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಚಾರವಾಗದಂತೆ ಎಲ್ಲರೂ ಸೇರಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜತೆಗೆ ಒಳ್ಳೆಯ ಆಡಳಿತ ನೀಡಬೇಕೆಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಸಲಹೆ ನೀಡಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಸೋಮವಾರ ಮಾಣಿಕನಗರ ಗ್ರಾಮ ಪಂಚಾಯತನ ನೂತನ ಅಧ್ಯಕ್ಷೆ ಪಂಚಶೀಲಾ ಹೆಗ್ಗಣಿ ಹಾಗೂ ಉಪಾಧ್ಯಕ್ಷ ಮಾಣಿಕ ನಿಮ್ಮಾಣಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಳೆಗಾಲವಾಗಿದ್ದರಿಂದ ಗ್ರಾಮಗಳಲ್ಲಿ ವಾಂತಿಭೇಧಿ ಸೇರಿದಂತೆ ಸಾಂಕ್ರಮಿಕ ರೋಗಗಳು ಹರಡದಂತೆ ಸ್ವಚ್ಚತೆಗೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತ್ಯೆ ನೀಡುವ ಜತಗೆ ಗ್ರಾಮಸಲ್ಲಿನ ಸಣ್ಣಪುಟ್ಟ ಸಮಸ್ಯೆ ಬಗೆಹರಿಸಲು ಮುಂದಾಗಿ. ಸದಾ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿದರು. ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಫ್ಸರ್‌ಮಿಯ್ಯಾ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ಓಂಕಾರ ತುಂಬಾ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಪ್ರಮುಖರಾದ ಬಾಬುರಾವ ಟೈಗರ್, ಶ್ರೀಮಂತ ಪಾಟೀಲ್, ಶಶಿಕಾಂತ ಗಂಗಶ್ರೀ, ವಿನೊದ ನಿಲಮನಳ್ಳಿ, ದಿಲೀಪ ಮರಪಳ್ಳಿ, ನಿಜಾಮೊದ್ಧಿನ್ ಇತರರಿದ್ದರು.