

ಮೈಸೂರು: ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ, ನವ ವಿಶ್ವಮಾನವ ಟ್ರಸ್ಟ್ ವತಿಯಿಂದ ನಗರದ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಗುರುವಾರ ಪತ್ರಿಕೋದ್ಯಮಿ ದಿ.ರಾಜಶೇಖರ ಕೋಟಿ ಸ್ಮರಣಾರ್ಥ ಕ್ಯಾಲೆಂಡರ್‌ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಪತ್ರಕರ್ತರಾದ ಗಿರೀಶ್ ಹುಣಸೂರು, ಎಂ.ಟಿ.ಮಹಾದೇವ, ಆರ್.ವಿರೇಂದ್ರ ಪ್ರಸಾದ್, ಶೇಖರ್ ಗೋಪಿನಾಥಂ, ಐತಿಚಂಡ ರಮೇಶ್ ಉತ್ತಪ್ಪ, ಎಂ.ಬಿ.ಪವನಮೂರ್ತಿ, ಪತ್ರಿಕಾ ಛಾಯಾಗ್ರಾಹಕ ಕೆ.ಹೇಮಚಂದ್ರ ನಾಯಕ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರನ್ನು ಅಭಿನಂದಿಸಲಾಯಿತು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ವಿಶ್ವಮಾನ ಹೆಸರಿಗೆ ಚ್ಯುತಿ ಬಾರದಂತೆ ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಕಾರ್ಯನಿರ್ವಹಿಸುತ್ತಿದೆ ಮೈಸೂರು ವಿಶ್ವವಿದ್ಯಾಲಯ ಇರುವವರೆಗೂ ವೇದಿಕೆ ಅಸ್ತಿತ್ವದಲ್ಲಿ ಇರಬೇಕು. ಆ ಮೂಲಕ ಸಮಾಜಮುಖಿ ಕಾರ್ಯನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮಾತನಾಡಿ, ಯುವ ಸಮೂಹವನ್ನು ಒಳ್ಳೆಯ ದಾರಿಯೆಡೆಗೆ ಕಂಡ್ಯೊಯುವ ಜವಾಬ್ದಾರಿ ಪತ್ರಿಕೋದ್ಯಮದ ಮೇಲೆ ಇದೆ. ದೇಶದ ಪ್ರಗತಿಗೆ ಪೂರಕವಾದ ವರದಿಗಳನ್ನು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಎನ್.ರಕ್ಷಿತಾ, ಯು.ಲಿಖಿತಶ್ರೀ, ನಿರ್ಮತಾ ಮಹೇಶ್, ಎಸ್.ಭೂಮಿಕಾ, ಎ.ಎಸ್.ಪ್ರಾರ್ಥನಾ, ಲಿಖಿತ ಶಿವಕುಮಾರಸ್ವಾಮಿ, ಎಸ್.ವರುಣ್ ಮತ್ತು ಮೈಸೂರು ವಿವಿಯಿಂದ ಚಿನ್ನದ ಪದಕ ಪಡೆದ ಎಂ.ಆರ್.ಭೂಮಿಕಾ, ಯು.ಎ.ಕಾವ್ಯಶ್ರೀ, ಪಿ.ಕೆ.ಸಂಗೀತಾ, ಎನ್.ಹರ್ಷಿತ್, ಶ್ರೀನಿವಾಸ್, ಸ್ಪೂರ್ತಿ ಮಹೇರ್ಶ, ಬಸಮ್ಮ ಮ್ಯಾಧೂಡ್, ಎ.ಎನ್.ಸುಮತಿ, ಆರ್.ದೇವಾನಂದ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಪ್ರೊ.ಶಿವರಾಜಪ್ಪ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಪತ್ರಿಕೋದ್ಯಮಿ ರಶ್ಮಿಕೋಟಿ, ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ನಿರ್ದೇಶಕಿ ಡಾ.ಎಂ.ಎಸ್.ಸಪ್ನ, ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಎಸ್.ವಿನೋದ್, ಖಜಾಂಚಿ ಕೆ.ಗಣೇಶ್, ನಿರ್ದೇಶಕಿ ಬಿ.ಎಸ್.ದಿನಮಣಿ ಇದ್ದರು.