ಕೃಷ್ಣೆಗೆ ಹರಿದು ಬಂದ ರಾಜಾಪುರ ಬ್ಯಾರೇಜ್ ನೀರು

Rajapur barrage water flowing into Krishna
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಹೊರ ಬಿಟ್ಟ ನೀರು ಕೃಷ್ಣಾ ನದಿಯತ್ತ ಹರಿಯುತ್ತಿರುವುದು.
Published on

ರಬಕವಿ-ಬನಹಟ್ಟಿ: ನೆರೆಯ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನ 50 ಗೇಟ್‌ಗಳಿಂದ 1200 ಕ್ಯೂಸೆಕ್‌ಗೂ ಹೆಚ್ಚು ಡೆಡ್ ಸ್ಟೋರೇಜ್ ನೀರನ್ನು ಹೊರಬಿಟ್ಟಿದ್ದು, ಕೆಲವೇ ಗಂಟೆಗಳಲ್ಲಿ ರಬಕವಿ ಬನಹಟ್ಟಿ ಸಮೀಪದ ಕೃಷ್ಣೆಯ ಒಡಲು ಸೇರಲಿದೆ ಎಂದು ನಗರಸಭೆ ಪೌರಾಯುಕ್ತ ಜಗದೀಶ ಈಟಿ ತಿಳಿಸಿದ್ದಾರೆ.

ಘಟಪ್ರಭಾ ಎಡ, ಬಲದಂಡೆ ಕಾಲುವೆ ಮೂಲಕ 1 ಟಿಎಂಸಿ ನೀರು ಬಿಡುತ್ತಿರುವುದರಿಂದ ಕೃಷ್ಣಾ ತೀರ ಪ್ರದೇಶದ ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ. ಗುರುವಾರ ಸಂಜೆ ತಮದಡ್ಡಿ ಸಮೀಪದಲ್ಲಿ ನದಿಗೆ ನೀರು ಬಂದು ತುಲುಪಿದೆ. ಶುಕ್ರವಾರ ಬೆಳಗಿನವರೆಗೆ ರಬಕವಿ ಬನಹಟ್ಟಿ ಮಹೀಷವಾಡಗಿ ಸೇತುವೆಗೆ ಬರಲಿದೆ ಎಂದು ಹೇಳಿದ್ದಾರೆ.

ನದಿಯಲ್ಲಿ ಅವಳಿ ನಗರಕ್ಕೆ ನೀರು ಪೂರೈಸುವ ಎಲ್ಲ ಯಂತ್ರೋಪಕರಣಗಳು ತಯಾರಿಯಲ್ಲಿದ್ದು, ನೀರು ಬಂದ ತಕ್ಷಣ ಮೋಟಾರ್ ಪಂಪ್‌ಸೆಟ್‌ಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net