ಸತ್ಯ ಹೇಳಿದ ರಾಜಣ್ಣಗೆ ವಜಾ ಶಿಕ್ಷೆ

dvg-Mahesh-Tenginakai-23-1.jpg
Published on

ಹುಬ್ಬಳ್ಳಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡಿದ್ದರು. ಆಗ ಕೆ.ಎನ್. ರಾಜಣ್ಣ ರಾಜ್ಯದಲ್ಲಿ ನಮ್ಮದೇ ಸರ್ಕಾರವಿತ್ತು. ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂದು ದೂರಿದ್ದರು. ಹೀಗೆ ಸತ್ಯ ಹೇಳಿದ ರಾಜಣ್ಣ ಅವರಿಗೆ ಕಾಂಗ್ರೆಸ್ ಸಂಪುಟದಿಂದ ವಜಾ ಶಿಕ್ಷೆ ನೀಡಿದೆ. ಸತ್ಯ ಹೇಳುವವರನ್ನು ಕಾಂಗ್ರೆಸ್ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಲೇವಡಿ ಮಾಡಿದ್ದಾರೆ.

ದೇಶದ ಕೆಲ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಮತಗಳ್ಳತನ ಮಾಡುತ್ತಿದೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಮುಂದುವರಿದ ಭಾಗವಾಗಿ ಬೆಂಗಳೂರಿಗೆ ಬಂದು ಹೋರಾಟ ನಡೆಸಿದ್ದರು. ಆಗ ಹೇಳಿಕೆ ನೀಡಿದ್ದ ರಾಜಣ್ಣ, ನಮ್ಮ ಸರ್ಕಾರ ಇದ್ದಾಗ ಅಧಿಕಾರಿಗಳು ತಪ್ಪು ಎಸಗಿದ್ದಾರೆ. ಈಗ ಏಕಾಏಕಿ ಹೋರಾಟ ನಡೆಸುವುದು ಎಷ್ಟು ಸೂಕ್ತ ? ಎಂದು ಪ್ರಶ್ನೆ ಮಾಡಿದ್ದರು. ರಾಜಣ್ಣ ಅವರ ಹೇಳಿಕೆ ಸತ್ಯವಾಗಿದೆ. ಆದರೆ, ಕಾಂಗ್ರೆಸ್‌ನವರು ಗುಲಾಮಗಿರಿ ಮಾಡುವವರಿಗೆ ಮನ್ನಣೆ ಕೊಡುತ್ತಾರೆ. ಸತ್ಯ ಹೇಳುವವರಿಗೆ ಬೆಲೆ ಕೊಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಕುಟುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net