ರೋಣ ತಾಲೂಕು ಪತ್ತಿನ ಸಹಕಾರಿಗೆ ರಾಜಣ್ಣ ಹೂಲಿ ಅಧ್ಯಕ್ಷ

SANMAN
Published on

ರೋಣ: ತಾಲೂಕು ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಾಜಣ್ಣ (ಅಂದಾನಪ್ಪ) ಹೂಲಿ ಮತ್ತು ಉಪಾಧ್ಯಕ್ಷರಾಗಿ ಸಂಗಣ್ಣ ಅಂಗಡಿ ಅವಿರೋಧವಾಗಿ ಆಯ್ಕೆಯಾದರು.

ರೋಣ ತಾಲೂಕು ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬುಧವಾರ ಚುನಾವಣೆ ಆಯ್ಕೆ ಪ್ರಕ್ರಿಯೆ ಜರುಗಿತು. ನೂತನ ಅಧ್ಯಕ್ಷ ರಾಜಣ್ಣ ಹೂಲಿ ಮಾತನಾಡಿ, ಸಹಕಾರಿ ಸಂಘದ ಆರ್ಥಿಕ ಪ್ರಗತಿ ಹಾಗೂ ಸಮಾಜದ ಜನರ ಆರ್ಥಿಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸದಸ್ಯರ ಸಲಹೆ-ಸೂಚನೆ ಪಡೆದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಅಂದಾನಪ್ಪ ಪಟ್ಟಣಶೆಟ್ಟಿ, ಬಣಜಿಗ ಸಮಾಜದ ತಾಲೂಕಾಧ್ಯಕ್ಷ ಮುತ್ತಣ್ಣ ಸಂಗಳದ, ವೀರಣ್ಣ ಶೆಟ್ಟರ, ಚನ್ನಮಲ್ಲಪ್ಪ ಗದಗ, ಸಂಗಪ್ಪ ಮೆಣಸಿನಕಾಯಿ, ರವಿ ಸಂಗನಬಶೆಟ್ಟರ, ಮುತ್ತಣ್ಣ ಕಡಗದ, ಬಸವರಾಜ ಕೊಟಗಿ, ಅಪ್ಪು ಕೊಟಗಿ, ಮುತ್ತಣ್ಣ ಕಡಗದ, ಶೇಖಣ್ಣ ಐಹೊಳಿ, ಮುತ್ತಣ್ಣ ಜಕ್ಕಲಿ, ಹುಚ್ಚೇಶ ಜವಳಿ, ಶಿವು ಹುಲ್ಲೂರ, ವಿಜಯ ಕುರುಡಗಿ, ಕುಮಾರ ಕಡಗದ, ಅಶೋಕ ಜಕ್ಕಲಿ, ಪ್ರಭು ಸಂಗಳದ, ಚಂದ್ರಶೇಖರ ಅಳಗವಾಡಿ, ವೀರೇಶ ರೋಣದ, ಶಿವಕುಮಾರ ಕಲಹಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net