

ಮೇಲುಕೋಟೆ: ಕಾರ್ತಿಕಮಾಸದ ರಾಜಮುಡಿ ಬ್ರಹ್ಮೋತ್ಸವ ಗುರುವಾರ ಮುಕ್ತಾಯವಾಗಿದ್ದು, ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆಗೆ ಮರಳಿಸಲಾಯಿತು.
9ದಿನಗಳಿಂದ ನಡೆಯುತ್ತಿದ್ದ ರಾಜಮುಡಿ ಬ್ರಹ್ಮೋತ್ಸವದ ಅಂತಿಮ ಕಿರೀಟಧಾರಣ ಕಾರ್ಯಕ್ರಮ ಬುಧವಾರ ನಡೆದಿದ್ದು, ತೀರ್ಥಸ್ನಾನದ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು. ಬ್ರಹ್ಮೋತ್ಸವದ ಅಷ್ಠತೀರ್ಥ ಮತ್ತು ತೊಟ್ಟಿಲಮಡು ಜಾತ್ರೆ ನಂತರ ಲಕ್ಷಾಂತರ ಭಕ್ತರು ಮೇಲುಕೋಟೆಗೆ ಆಗಮಿಸಿ ದೇವರ ದರ್ಶನ ಪಡೆದರು.