ಕೌಟುಂಬಿಕ ಜೀವನದ ವಾಸ್ತವ ತೆರೆದಿರುವ ರಾಜಯೋಗ

17KDR1
ಕಡೂರಿನ ವಿಜಯಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಧರ್ಮಣ್ಣ ಕಡೂರು ಅಭಿನಯಿಸಿರುವ ರಾಜಯೋಗ ಚಿತ್ರಪ್ರದರ್ಶಕ್ಕೂ ಸಂಭ್ರಮಾಚರಣೆಯಲ್ಲಿ ಶಾಸಕ ಕೆ.ಎಸ್. ಆನಂದ್ ಮಾತನಾಡಿದರು. ತೋಟದ ಮನೆ ಮೋಹನ್‌ಕುಮಾರ್, ಮರುಗುದ್ದಿಮನು, ಪ್ರಕಾಶ್, ರಾಜು, ಸುರೇಶ್, ಹೊನ್ನಪ್ಪ ಮತ್ತಿತರಿದ್ದರು.
Published on

ಕಡೂರು: ಕೌಟುಂಬಿಕ ಜೀವನದ ವಾಸ್ತವ ಚಿತ್ರಣವನ್ನು ತೆರೆಯ ಮೇಲೆ ಅದ್ಬುತ ಅಭಿನಯದೊಂದಿಗೆ ಎಲ್ಲರ ಮನ ಗೆದ್ದಿರುವ ಕಡೂರಿನ ಹೆಮ್ಮೆಯ ನಟ ಧರ್ಮಣ್ಣನಿಗೆ ರಾಜಯೋಗ ಚಿತ್ರದಿಂದ ಮತ್ತಷ್ಟು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಯೋಗ ಕೂಡಿ ಬರಲಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ವಿಜಯಲಕ್ಷ್ಮೀ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆಕಂಡ ರಾಜಯೋಗ ಚಿತ್ರ ಪ್ರದರ್ಶನಕ್ಕೂ ಮುನ್ನ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ಶ್ರಮಿಕ ಜೀವಿಯಾಗಿ ಬೆಳೆದು ಎಲ್ಲರ ಮೆಚ್ಚಿನ ಸ್ನೇಹ ಜೀವಿಯಾದ ಧರ್ಮಣ್ಣ ತಮ್ಮ ಉತ್ತಮ ಕಲಾ ಪ್ರತಿಭೆಯೊಂದಿಗೆ ರಾಜ್ಯಾದ್ಯಂತ ಗುರುತಿಸಿಕೊಂಡಿರುವುದು ತಾಲೂಕಿಗೆ ಹಿರಿಮೆ ಮೂಡಿಸಿದೆ. ಹಲವು ನಾಟಕಗಳು, ರಂಗಭೂಮಿ ಕಲಾವಿದನಾಗಿ ಹೊರಹೊಮ್ಮಿ ಪ್ರಸಿದ್ದ ನಾಯಕ ನಟರೊಂದಿಗೆ ವಿಭಿನ್ನ ಪಾತ್ರಗಳಿಂದ ಚಿತ್ರದೋದ್ಯಮ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ಇದೀಗ ಉತ್ತಮ ಚಿತ್ರತಂಡದೊಂದಿಗೆ ಪರಿಪೂರ್ಣ ನಾಯಕ ನಟನಾಗಿ ರಾಜಯೋಗ ಚಿತ್ರದೊಂದಿಗೆ ಹೊರ ಹೊಮ್ಮಿರುವುದು ಸಂತಸ ಮೂಡಿಸಿದೆ ಎಂದರು.
ಪುರಸಭೆ ಸದಸ್ಯ ತೋಟದ ಮನೆ ಮೋಹನ್ ಕುಮಾರ್ ಮಾತನಾಡಿ, ಉತ್ತಮ ಕಥೆ ಆಧಾರಿತವಾಗಿರುವ ರಾಜಯೋಗ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕಡೂರಿನ ಧರ್ಮಣ್ಣ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ ಶತದಿನೋತ್ಸವದೊಂದಿಗೆ ಮತ್ತಷ್ಟು ಯಶಸ್ವಿ ಯಾಗಲಿ ಎಂದು ಹಾರೈಸಿದರು.
ಪುರಸಭೆ ಸದಸ್ಯ ಮರುಗುದ್ದಿ ಮನು, ಪ್ರಕಾಶ್, ರಾಜು, ಹೊನ್ನಪ್ಪ, ಸಪ್ತ ಕೋಟಿ ಧನಂಜಯ್, ವೆಂಕಟೇಶ್, ಸುರೇಶ್, ಚೇತನ್, ಅರುಣ, ಗೋಪಿ ಹಾಗೂ ದರ್ಶನ್, ಸುದೀಪ್ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net