ಒತ್ತಡಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ

New PM 1New
Published on

ಹುಬ್ಬಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಮೇ 24 ರಂದು ಬೆಳಗ್ಗೆ 10 ಗಂಟೆಗೆ ಧಾರವಾಡ ಸತ್ತೂರಿನ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ‘ಒತ್ತಡಮುಕ್ತ ಜೀವನಕ್ಕಾಗಿ ರಾಜಯೋಗ ಧ್ಯಾನ’ ಪ್ರೇರಣಾದಾಯಿ ಸಂದೇಶ ಹಾಗೂ ‘ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ’ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ ಬ್ರಹ್ಮಕುಮಾರೀಸ್ ಸಂಚಾಲಕಿ ಬ್ರಹ್ಮಕುಮಾರಿ ನಿರ್ಮಲಾದೇವಿ, 140 ದೇಶಗಳಲ್ಲಿ ವರ್ಷವಿಡೀ ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಯೋಗ, ಧ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಈ ಕಾರ್ಯಕ್ರಮದಡಿ ವಿವಿಧ ಸೆಮಿನಾರ್, ಕಾರ್ಯಾಗಾರ, ಸಮ್ಮೇಳನ, ಪ್ರದರ್ಶನ, ರ್ಯಾಲಿಗಳನ್ನು ಏರ್ಪಡಿಸಲಾಗುವುದು. ಆ ಮೂಲಕ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿ, ಮಾನವನ ಮನ ಬೆಸೆಯುವ ಕಾರ್ಯ ಮಾಡಲಾಗುವುದು ಎಂದರು.

ಬ್ರಹ್ಮಕುಮಾರೀಸ್ ಸಂಸ್ಥೆಯ ಸಹ ಮುಖ್ಯ ಸಂಚಾಲಕರಾದ ಅಬುಪರ್ವತದ ಹಿರಿಯ ತಪಸ್ವಿನಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದಿಜಿ, ಸಂಸ್ಥೆಯ ಅಖಿಲ ಭಾರತ ಮಹಿಳಾ ವಿಂಗ್ ಅಧ್ಯಕ್ಷೆ ದೆಹಲಿಯ ಹಿರಿಯ ತಪಸ್ವಿನಿ ರಾಜಯೋಗಿನಿ ಬ್ರಹ್ಮಕುಮಾರಿ ಚಕ್ರಧಾರಿ ದೀದಿಜಿ ಪಾಲ್ಗೊಳ್ಳುವರು.

ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಸಚಿವ ಎಚ್.ಕೆ. ಪಾಟೀಲ ಅತಿಥಿಯಾಗಿ ಪಾಲ್ಗೊಳ್ಳುವರು. ಬ್ರಹ್ಮಕುಮಾರೀಸ್ ಸೇವಾ ಕೇಂದ್ರಗಳ ಹುಬ್ಬಳ್ಳಿ ವಲಯದ ನಿರ್ದೇಶಕ ರಾಜಯೋಗಿ ಡಾ. ಬಿ.ಕೆ. ಬಸವರಾಜ ಸಾನ್ನಿಧ್ಯ ವಹಿಸುವರು ಎಂದು ವಿವರಿಸಿದರು.

ಬ್ರಹ್ಮಕುಮಾರಿಯರಾದ ವಾಣಿ, ರೋಹಿಣಿ, ಚನ್ನಮ್ಮ, ಮಂಗಳಾ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net