ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ನಿನ 'ಡಾಟರ್ ಆಫ್ ಪ್ರಾವಿಡೆನ್ಸ್' ಚಿತ್ರಕಲಾ ಪ್ರದರ್ಶನ

New Project
Published on

ಬೆಂಗಳೂರು: ಚಿತ್ರಕಲಾ ಮಾಂತ್ರಿಕ ರಾಜಾ ರವಿವರ್ಮ ಅವರ 176ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ‘ಡಾಟರ್ ಆಫ್ ಪ್ರಾವಿಡೆನ್ಸ್’ ಎಂಬ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದೆ. ತಿರುವಾಂಕೂರಿನ ರಾಜಮನೆತನದ ಕೊನೇ ರಾಣಿ ಹಾಗೂ ರವಿವರ್ಮರ ಹಿರಿಯ ಮೊಮ್ಮಗಳು ಮಹಾರಾಣಿ ಸೇತು ಲಕ್ಷ್ಮಿಬಾಯಿ ಜೀವನ ಚರಿತ್ರೆಯನ್ನು ಕೇಂದ್ರೀಕರಿಸಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.

ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್, ನಂ.38, ಮೈನಿ ಸದನ್, 7ನೇ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು ಇಲ್ಲಿ ಈಗಾಗಲೇ ಪ್ರದರ್ಶನ ಆರಂಭವಾಗಿದ್ದು, ಮೇ 30 ರವರೆಗೆ ಪ್ರದರ್ಶನ ಮುಂದುವರೆಯಲಿದೆ. ಪ್ರದರ್ಶನದಲ್ಲಿ ಅಪರೂಪದ ಹಲವು ಚಿತ್ರಗಳನ್ನು ಇಡಲಾಗಿದ್ದು, ಮಹಾರಾಣಿಯ ಮೊಮ್ಮಗಳು ಹಾಗೂ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ಅಧ್ಯಕ್ಷೆ ಭರಣಿ ತಿರುನಾಳ್ ರುಕ್ಮಿಣಿ ಬಾಯಿ ತಂಪುರನ್ ಅವರ ಅದ್ಭುತ ತೈಲ ವರ್ಣಚಿತ್ರವನ್ನೂ ಒಳಗೊಂಡಿದೆ ಎಂದು ೌಂಡೇಶನ್ ಟ್ರಸ್ಟಿ ಗೀತಾಂಜಲಿ ಮೈನಿ ತಿಳಿಸಿದ್ದಾರೆ.

ತಿರುವಾಂಕೂರು ಸಂಸ್ಥಾನವನ್ನು ಆಳ್ವಿಕೆ ನಡೆಸಿದ ನಂತರ ಮಹಾರಾಣಿ ಲಕ್ಷ್ಮಿಬಾಯಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಬೆಂಗಳೂರಿನ ರಿಚಮಂಡ್ ರಸ್ತೆಯಲ್ಲಿರುವ ಮನೆಯಲ್ಲಿ. 35 ವರ್ಷ ಬೆಂಗಳೂರಿನಲ್ಲಿ ಜೀವಿಸಿದ್ದ ಮಹಾರಾಣಿಯ ಜೀವನ ನಿರೂಪಿಸುವ ಮತ್ತು ರವಿವರ್ಮರ ಕಲೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net