

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಾದಾನಿ, ಶಿಕ್ಷಣಪ್ರೇಮಿ ಲಿಂ. ರಾಜಾ ಲಖಮಗೌಡ್ರು ಬಡವರ ಉದ್ಧಾರಕ್ಕೆ ಶ್ರಮಿಸಿದವರು. ಅನಕ್ಷರತೆ ಹೋಗಲಾಡಿಸಲು ಕೆಎಲ್‌ಇ ಸಂಸ್ಥೆ ಹಾಗೂ ಹಲವಾರು ಸಂಘ- ಸಂಸ್ಥೆಗಳಿಗೆ ಉದಾರ ದಾನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದು ಡಾ. ಲಿಂಗರಾಜ ಸಿ. ಮುಳ್ಳಳ್ಳಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಆರ್.ಎಲ್.ಎಸ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ 161ನೇ ರಾಜಾ ಲಖಮಗೌಡ್ರು ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಚಿಕ್ಕೋಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸಿ.ವಿ. ಕಣಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಚಾರ್ಯ ಆರ್.ಬಿ. ಬಾನಪ್ಪನವರ ಪರಿಚಯಿಸಿದರು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಪಿ.ವಿ. ಬೆಟಗೇರಿ, ಎಸ್.ಎಸ್. ಹರಕುಣಿ, ಇತರರಿದ್ದರು. ಎಸ್.ಎಸ್. ಜಂಬಗಿ ಪ್ರಾರ್ಥಿಸಿದರು. ಎಂ.ಆರ್. ಹಿರೇಮಠ ನಿರೂಪಿಸಿದರು. ವೈ.ಪಿ. ತಳವಾರ ವಂದಿಸಿದರು.