ರಾಜಾಲಖಮಗೌಡ ಕಾಲೇಜಿನಲ್ಲಿ ಆ.5ಕ್ಕೆ ನ್ಯಾಯಾಧೀಶರ ಸನ್ಮಾನ ಸಮಾರಂಭ

IMG-20230803-WA0014.jpg
Published on

ಬೆಳಗಾವಿ : ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಈ ಹಿಂದೆ ಕಲಿತು ಹೋದ, ಹಳೆಯ ವಿಧ್ಯಾರ್ಥಿಗಳು ಇಂದು ಪ್ರತಿಷ್ಠಿತ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು  ಸಂಸ್ಥೆಗೆ ಹೆಮ್ಮೆಯ ವಿಷಯ.  ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ  ಪ್ರಸನ್ನ ಬಿ, ವರಾಳೆ ಅವರನ್ನು ಆಗಸ್ಟ್ 05 ರಂದು, ವಿಶೇಷ ಕಾರ್ಯಕ್ರಮ ಆಯೋಹಿಸಿ ಅಭಿನಂದಿಸಲಾಗುತ್ತಿದೆ ಎಂದು ಕಾಲೇಜಿನ ಕಾರ್ಯದರ್ಶಿಯಾದ ಅರುಣ ಗಣಾಚಾರಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತ‌ನಾಡಿದ ಅವರು, ಸಂಸ್ಥೆ 1930ರಲ್ಲೆ ಪ್ರಾರಂಭವಾಗಿದ್ದು, ರಾಜ್ಯದ ಪ್ರತಿಷ್ಠಿತ ಎಲ್ಲಾ ನ್ಯಾಯಾಲಯದಲ್ಲಿಯೂ ಸರ್ಕಾರಿ ನ್ಯಾಯವಾದಿಗಳಾದ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವುದು  ಸಂಸ್ಥೆಯ ಹೆಮ್ಮೆ ಆಗಿದೆ, ಆಗಸ್ಟ್ 5 ರಂದು ಸಂಜೆ 4 ಕ್ಕೇ ಈ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಕಾಲೇಜಿನ ಅನೇಕ ಸಾಧಕರು ಭಾಗಿಯಾಗಲಿದ್ದಾರೆ ಅವರೆಲ್ಲರ ಸಮ್ಮುಖದಲ್ಲಿ ಈ ಐದು ನ್ಯಾಯಾಧೀಶರಿಗೆ ಅಭಿನಂದನೆ ಜರುಗಲಿದೆ ಎಂದು ಹೇಳಿದರು.

ಕೇವಲ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಷ್ಟೇ ಅಲ್ಲದೇ, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಈ ಕಾಲೇಜಿನ ವಿಧ್ಯಾರ್ಥಿಗಳು ಸಾಧನೆ ಮಾಡಿದ್ದು, ಸಂಸದರಾಗಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಸುರೇಶ ಅಂಗಡಿ ಅವರು ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಕರ್ನಾಟಕ ಉಚ್ಛ ನ್ಯಾಯಾಲಯದ 40 ನ್ಯಾಯಾಧೀಶರಲ್ಲಿ ನಮ್ಮ ಸಂಸ್ಥೆಯ 5 ನ್ಯಾಯಾಧೀಶರು ಇರುವದು ತುಂಬಾ ಹೆಮ್ಮೆಯ ವಿಷಯ, ನ್ಯಾಯಾಂಗ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಸಂಸ್ಥೆ ಹಾಗೂ ಕಾಲೇಜಿನ  ಈ ಸಾಧನೆಗೆ ನಮ್ಮೆಲ್ಲರಿಗೂ ತುಂಬಾ ಸಂತಸದ ವಿಷಯ  ಎಂದರು.

ಸುದ್ದಿಗೋಷ್ಠಿಯಲ್ಲಿ  ಸಂಸ್ಥೆಯ ಸದಸ್ಯರಾದ ಆರ್ ಎಸ್ ಮುತಾಲಿಕ ದೇಸಾಯಿ, ಸಂಸ್ಥೆಯ ಅಧ್ಯಕ್ಷ ಎಂ ಆರ್ ಕುಲಕರ್ಣಿ, ಪ್ರಿನ್ಸಿಪಾಲ್ ಆದ ಎ ಏಚ್ ಹವಾಲ್ದಾರ, ಸಮಿನ ಬೇಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net