9ರಂದು ರಾಜಾ ಹಂಡೆ ಹನುಮಪ್ಪನಾಯಕ ಜಯಂತಿ

Raja Hande Hanumappanayaka Jayanti on the 9th
ಬಸವನ ಬಾಗೇವಾಡಿಯಲ್ಲಿ ಹಂಡೆವಜೀರ ಸಮಾಜದ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಜಿ. ಪಾಟೀಲ, ಸಿದ್ಧನಗೌಡ ಪಾಟೀಲ, ಸಂಗನಗೌಡ ಯಂಕಂಚಿ ಇತರರಿದ್ದರು.
Published on

ಬಸವನಬಾಗೇವಾಡಿ : ಅಖಿಲ ಕರ್ನಾಟಕ ವೀರಶ್ಯೆವ ಲಿಂಗಾಯತ ಹಂಡೆವಜೀರ ಸಂಘದಿಂದ ರಾಜಾ ಹಂಡೆ ಹನುಮಪ್ಪನಾಯಕರ ಜಯಂತಿ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ತಾಲೂಕಿನ ಸಂಕನಾಳದಲ್ಲಿ ಏ.9 ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಪಾಟೀಲ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾ ಹಂಡೆ ಹನುಮಪ್ಪ ನಾಯಕ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಅವರ ಜಯಂತಿಯನ್ನು ಪ್ರತಿ ವರ್ಷ ಅದೇ ತಾಲೂಕಿನ ಬೇರೆ, ಬೇರೆ ಗ್ರಾಮಗಳಲ್ಲಿ ಆಚರಿಸಲಾಗುತ್ತದೆ ಎಂದರು.

ಈ ವರ್ಷ ಸಂಕನಾಳದಲ್ಲಿ ಆಚರಿಸಲಾಗುತ್ತಿದ್ದು, ಮುತ್ತಗಿಯ ವೀರ ರುದ್ರಮುನಿ ಶಿವಾಚಾರ್ಯರು, ಜಮಖಂಡಿ ಓಲೇಮಠದ ಆನಂದ ದೇವರು, ಹೂವಿನಹಿಪ್ಪರಗಿ ಪತ್ರಿಮಠದ ದಾಕ್ಷಾಯಣಿ ಅಮ್ಮ, ಗಂಗಾಧರಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು.

ಸಮಾಜದ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮೂರ್ತಿ ಉದ್ಘಾಟಿಸುವರು. ಮಾಜಿ ಶಾಸಕ ಸೋಮನಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಪಾಟೀಲ, ಮುಖಂಡರಾದ ಜಿ.ಎನ್. ಪಾಟೀಲ, ಮಂಜುಳಾ ರೇವಡಿ, ಎಸ್.ಜಿ. ಪಾಟೀಲ, ದೇವೇಂದ್ರ ಗೋನಾಳ, ಬೆಳ್ಳಿ ಪ್ರಭುಗೌಡ, ಸಂಗನಗೌಡ ಯಂಕಂಚಿ, ಸಂಗನಗೌಡ ಕರಭಂಟನಾಳ, ವಿ.ಕೆ. ಪಾಟೀಲ, ಪ್ರೇಮಕುಮಾರ ಮ್ಯಾಗೇರಿ, ಸಿದ್ಧನಗೌಡ ಪಾಟೀಲ ಉಪಸ್ಥಿತರಿರುವರು ಎಂದರು.

ಸಿದ್ಧನಗೌಡ ಪಾಟೀಲ, ಸಂಗನಗೌಡ ಯಂಕಂಚಿ, ದೇವೇಂದ್ರ ಗೋನಾಳ, ಸಂಗನಗೌಡ ಹೊಸಗೌಡರ, ಪ್ರೇಮಕುಮಾರ ಮ್ಯಾಗೇರಿ, ಬಸವರಾಜ ಹಚ್ಯಾಳ, ಶೇಖರ ಗೌಡ ಬಿರಾದಾರ, ಆರ್.ಎಸ್. ಪಾಟೀಲ, ಪ್ರಭುಗೌಡ ಬೆಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net