ನ.24ರಂದು ಕೆ.ಎಂ.ದೊಡ್ಡಿಯಲ್ಲಿ ರೈತ ಹುತಾತ್ಮ ದಿನಾಚರಣೆ: ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಶಂಕರೇಗೌಡ ಮಾಹಿತಿ

Raitha Sangha press conference Mandya
Published on

ಮಂಡ್ಯ: ರಾಜ್ಯ ರೈತ ಸಂಘದ ವತಿಯಿಂದ ನ.24ರಂದು ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ನೀರಾವರಿ ಕಚೇರಿ ಮುಂಭಾಗ 42ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಹಾಗೂ ದಿವಂಗತ ನಾಯಕರಾದ ಎಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್, ಕೋಣಸಾಲೆ ನರಸರಾಜು, ಸಾದೊಳಲು ಪುಟ್ಟಸ್ವಾಮಯ್ಯ ನೆನಪಿನಲ್ಲಿ ತಾಲೂಕುಮಟ್ಟದ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ತಿಳಿಸಿದರು.

42 ವರ್ಷದ ಹಿಂದೆ ಕಾರ್ಖಾನೆಗೆ ಸರಬರಾಜು ಮಾಡುವ ಕಬ್ಬಿನ ಬೆಲೆ ನೀಡುವಲ್ಲಿ ತಾರತಮ್ಯ ಧೋರಣೆ ಖಂಡಿಸಿ ಗೆಜ್ಜಲಗೆರೆಯಲ್ಲಿ ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗುಂಡೂರಾವ್ ಸರ್ಕಾರ ಗೋಲಿಬಾರ್ ಮಾಡಿತ್ತು. ಆ ಘಟನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಾಗೂ ರೈತ ಸಂಘ ಕಟ್ಟಲು ಹೋರಾಟ ನಡೆಸಿ ಅಗಲಿದ ನಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಬೆಳಗ್ಗೆ 11 ಗಂಟೆಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಧ್ವಜಾರೋಹಣ ಮಾಡುವರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸಮಾವೇಶ ಉದ್ಘಾಟಿಸುವರು. ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ಕಾರ್ಯಾಧ್ಯಕ್ಷರಾದ ಎ.ಎಂ.ಮಹೇಶ್‌ಪ್ರಭು, ಎ. ಗೋವಿಂದರಾಜು, ಜೆ.ಎಂ.ವೀರಸಂಗಯ್ಯ, ಯಧುಶೈಲಾ ಸಂಪತ್ ಸೇರಿದಂತೆ ಹಲವು ಭಾಗವಹಿಸಲಿದ್ದಾರೆ. ರೈತರ ಪರವಾಗಿ ವಿವಿಧ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದರು.

ಸಂಘದ ಲಿಂಗಪ್ಪಾಜಿ, ರವಿಕುಮಾರ್, ಶಂಕರ್, ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net