ಕರ್ನಾಟಕ ರಾಜ್ಯ ರೈತ ಸಂಘಕ್ಕೆ ನೇಮಕ

raitha sangha
Published on

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕುಶಾಲನಗರ ತಾಲೂಕು ನೂತನ ಅಧ್ಯಕ್ಷರಾಗಿ ಎಂ.ಎಸ್. ಕುಮಾರ್ ನೇಮಕವಾಗಿದ್ದಾರೆ. ಸಂಘಟನೆ ರಾಜ್ಯಾಧ್ಯಕ್ಷ ಮಂಜೇಗೌಡ ನೇತೃತ್ವದಲ್ಲಿ ಗುರುವಾರ ಈ ನೇಮಕ ಮಾಡಲಾಯಿತು. ತಾಲೂಕು ಸಂಚಾಲಕರಾಗಿ ಕಿಟ್ಟಿ (ಕೃಷ್ಣದರ್ಶನ್), ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾಗಿ ಎಂ.ಸಿ. ಸಂತೋಷ್, ಕಾರ್ಯದರ್ಶಿಯಾಗಿ ಜಯರಾಮ್, ಕುಶಾಲನಗರ ನಗರ ಅಧ್ಯಕ್ಷರಾಗಿ ಗಿರಿ ಪ್ರಸಾದ್ (ಗಣೇಶ್), ಉಪಾಧ್ಯಕ್ಷರಾಗಿ ಲೋಕೇಶ್, ಗಿರೀಶ್, ಮಂಜು ಕೋಟಿ, ಕಾರ್ಯದರ್ಶಿಯಾಗಿ ರವಿ ಶೆಟ್ಟಿ, ಆಟೋ ಘಟಕದ ನಗರ ಅಧ್ಯಕ್ಷರಾಗಿ ಎಂ.ಪಿ.ನವೀನ್ ನೇಮಕವಾಗಿದ್ದಾರೆ.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ರಾಜ್ಯ ವಕ್ತಾರ ಗುರುರಾಜ್, ರಾಜ್ಯ ಕಾರ್ಯದರ್ಶಿ ರವಿಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮೇಗೌಡ, ಬಿಳಿಕೆರೆ ಹೋಬಳಿ ಅಧ್ಯಕ್ಷೆ ಜಯಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಪದಾಧಿಕಾರಿಯಾದ ಕುಮಾರ್ ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net