ಪುತ್ತೂರು: ಕಂದಾಯ ಇಲಾಖೆ ಭೂಮಿ ಮಾಲೀಕರ ಪಹಣಿಗೆ ಆಧಾರ್ ಲಿಂಕಿಂಗ್ ಪ್ರಕ್ರಿಯೆಯನ್ನು ಮಾಡುತ್ತಿದ್ದು, ಜಿಲ್ಲೆಯ ಕೃಷಿಕರು ಸರ್ಕಾರಿ ಸವಲತ್ತುಗಳಿಂದ ವಂಚನೆಯಾಗದ ರೀತಿಯಲ್ಲಿ ತಕ್ಷಣ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಬೇಕೆಂದು ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದ್ದಾರೆ.
ಸರ್ಕಾರ ಜಾಗಕ್ಕೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ತಿಂಗಳಿಂದ ಹಮ್ಮಿಕೊಂಡಿದ್ದು, ಜಿಲ್ಲೆಯ ಜನರು ಇದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಗ್ರಾಮಕರಣಿಕರು ಕೆಲವು ಭಾಗದಲ್ಲಿ ಅಸಡ್ಡೆ ತೋರಿಸಿತ್ತಿರುವುದರಿಂದ ಆಧಾರ್ ಲಿಂಕ್ ಕಡಿಮೆಯಾಗಿದೆ. ಕೃಷಿಕರು ಹಾಗೂ ಜಾಗದ ಮಾಲೀಕರು ಆಧಾರ್ ಜೋಡಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಜಾಗದ ವಿಚಾರದಲ್ಲಿ ನಡೆಯುವ ಅಕ್ರಮಗಳ ತಡೆಗೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.