ರೈತ ಸಭಾ ಭವನ ಕಟ್ಟಡ ಉದ್ಘಾಟನೆ ಇಂದು

ಕೆ.ಆರ್.ಪೇಟೆಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ.ಪುರುಷೋತ್ತಮ್ ಮಾತನಾಡಿದರು.
ಕೆ.ಆರ್.ಪೇಟೆಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ.ಪುರುಷೋತ್ತಮ್ ಮಾತನಾಡಿದರು.
Published on

ಕೆ.ಆರ್.ಪೇಟೆ: ಕಸಬಾ ಸೊಸೈಟಿಯಿಂದ ಪಟ್ಟಣದಲ್ಲಿ ನಿರ್ಮಿಸಿರುವ ನೂತನ ಕೆ.ಎನ್.ಕೆಂಗೇಗೌಡ ರೈತ ಸಭಾ ಭವನದ ಕಟ್ಟಡವನ್ನು ಡಿ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ತಿಳಿಸಿದರು.

ಸಂಘದಿಂದ ನೂತನವಾಗಿ ನಿರ್ಮಿಸಿರುವ ಕೆಂಗೇಗೌಡ ರೈತ ಸಭಾಭವನದ ಕಟ್ಟಡವನ್ನು ಅಂದು ಮಧ್ಯಾಹ್ನ ಸಿಎಂ ಉದ್ಘಾಟಿಸಲಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಬ್ಯಾಂಕಿಂಗ್ ಶಾಖೆ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಕೆಂಗೇಗೌಡ ಗೊಬ್ಬರದ ಶಾಖೆ, ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರೆ, ಶಾಸಕ ಎಚ್.ಟಿ.ಮಂಜು ಸಹಕಾರ ಧ್ವಜಾರೋಹಣ ನೆರವೇರಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿದರೆ, ಮಾಜಿ ಸಚಿವ ಡಾ.ನಾರಾಯಣಗೌಡ ಸಂಘದ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಿದ್ದಾರೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ರೈತರಿಗೆ ಬೆಳೆ ಸಾಲ ವಿತರಿಸಿದರೆ, ಉಪಾಧ್ಯಕ್ಷ ಎಚ್.ಕೆ.ಅಶೋಕ್ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ ನೀಡುವರು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷೆ ಶೋಭಾ ಬಸವರಾಜು, ಕಾರ್ಯದರ್ಶಿ ಬಿ.ಎನ್.ಕಾಂತರಾಜು, ವೃತ್ತ ಮೇಲ್ವಿಚಾರಕರಾದ ಪಾಷ, ರಾಘವೇಂದ್ರ, ಜಲೇಂದ್ರ, ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎಸ್.ಚಂದ್ರು, ಜವರೇಗೌಡ, ಕೆ.ಟಿ.ಚಕ್ರಪಾಣಿ, ಕೆ.ಎನ್.ಕಾಳೇಗೌಡ, ಚಂದ್ರಶೇಖರ್, ಸಿ.ಜಿ.ಮಂಜೇಗೌಡ, ಬಲರಾಮೇಗೌಡ, ರಾಜನಾಯಕ, ರಾಜಯ್ಯ ಹಾಗೂ ಕೆ.ಆರ್.ರಘು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net