ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ರೈತ ಹೋರಾಟ ಸಮಿತಿ ವಾಗ್ದಾಳಿ

Published on

ಮೈಸೂರು: ಕಡಕೊಳ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು 1996ರಲ್ಲಿ ತನಗೆ ಅಗತ್ಯವಿಲ್ಲದಿದ್ದರೂ ಹೆಚ್ಚುವರಿ ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಂಡಿದ್ದು, ಇದಕ್ಕೆ ತಕ್ಕ ಪರಿಹಾರ ನೀಡಬೇಕೆಂಬ ನ್ಯಾಯಾಲಯದ ಆದೇಶವನ್ನೂ ನಿಗಮ ಉಲ್ಲಂಘಿಸಿದೆ ಎಂದು ಕಾಳಿ ಬೀರೇಶ್ವರ ರೈತ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಂಠ ತೋಂಟೇಗೌಡ ದೂರಿದರು.

ಜತೆಗೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಕಾಮಗಾರಿ ನಡೆಸುತ್ತಿದ್ದು, ಇದನ್ನು ತಡೆಯಲು ಹೋದರೆ ಅಧಿಕಾರಿಗಳು ಪೊಲೀಸರ ನೆರವಿನಿಂದ ಬಂಧನದ ಬೆದರಿಕೆ ಹಾಕಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ನಿಯಮಿತವು ಒಟ್ಟಾರೆ 116 ಎಕರೆ ಜಮೀನು ವಶಕ್ಕೆ ಪಡೆದಿದೆ. ಆದರೆ ಅದಕ್ಕೆ ಬೇಕಾಗಿದ್ದುದು ಕೇವಲ 10 ಎಕರೆ ಜಮೀನು ಮಾತ್ರ. ಹೀಗಾಗಿ ಉಳಿದ ಎಲ್ಲ ಜಮೀನು ಬೀಳು ಬಿಡಲಾಗಿದೆ. ತಮಗೆ ನ್ಯಾಯಯುತವಾಗಿ ಪರಿಹಾರ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಹೋದಾಗ ಆದೇಶ ನಮ್ಮ ಪರವಾಗಿ ನ್ಯಾಯಾಲಯ ನೀಡಿದೆ. ಆದರೆ ಅದನ್ನು ಪಾಲನೆ ಮಾಡಿಲ್ಲ ಎಂದರು. ಶೀಘ್ರವಾಗಿ ಸಮಸ್ಯೆ ಬಗೆಹರಿಸದಿದ್ದರೆ ಕಡಕೊಳದಲ್ಲಿನ ನಿಗಮದ ಕಚೇರಿ ಬಳಿ ಆಮರಣಾಂತ ಉಪವಾಸ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಪದಾಧಿಕಾರಿಗಳಾದ ಕೆ.ಎನ್. ನಾಗರಾಜು, ಕಡಕೊಳ ಹರೀಶ್, ಸಿದ್ದರಾಜು, ಮಹದೇವ, ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net