ಒಣದ್ರಾಕ್ಷಿ ಜಾಮ್​ ಸವಿದ ಸಿಎಂ

Raisin Jam Savida CM
ಬಸವನಬಾಗೇವಾಡಿ ತಾಲೂಕಿನ ಕರಂಭಟನಾಳ ಶ್ರೀ ಗುರು ಗಂಗಾಧರೇಶ್ವರ ಆಹಾರ ಉತ್ಪನ್ನ ಸಮಿತಿಯವರು ಒಣದ್ರಾಯಲ್ಲಿ ತಯಾರಿಸಿದ ಜಾಮ್​ನ್ನು ಸಿ.ಎಂ.ಸಿದ್ದರಾಮಯ್ಯ ಅವರು ಸವಿಯುತ್ತಿರುವುದು. ಮಠದ ಶಿವಕುಮಾರ ಶ್ರೀಗಳು ಇತರರಿದ್ದರು.
Published on

ಬಸವನಬಾಗೇವಾಡಿ: ತಾಲೂಕಿನ ಕರಂಭಟನಾಳ ಶ್ರೀ ಗುರು ಗಂಗಾಧರೇಶ್ವರ ಆಹಾರ ಉತ್ಪನ್ನ ಸಮಿತಿಯವರು ತಮ್ಮ ತೋಟದಲ್ಲಿ ಬೆಳೆದ ಒಣದ್ರಾಯಲ್ಲಿ ತಯಾರಿಸಿದ ಮೂರು ತರದ ಜಾಮ್​ನ್ನು ಸಿಎಂ ಸಿದ್ದರಾಮಯ್ಯ ಅವರು ಸವಿದರು.

ಸ್ವಾತಂತ್ರೋತ್ಸವದ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಬೆಂಗಳೂರು ನಗರದ ಲಾಲ್​ಬಾಗ್​ದಲ್ಲಿ ಕಳೆದ ಆಗಸ್ಟ್​ 8 ರಂದು ಆಯೋಜಿಸಿದ್ದ ಲಪುಷ್ಪ ಮೇಳವನ್ನು ಉದ್ಘಾಟಿಸಿದ ನಂತರ ಸಿದ್ದರಾಮಯ್ಯ ಅವರು ಜಾಮ್​ನ ಸವಿ ನೋಡಿದರು.

ಭಾರತೀಯ ಆಹಾರ ಸಂಶೋಧನೆ ಕೇಂದ್ರ ಮೈಸೂರಿನ ಸಿ.ಎ್​.ಟಿ.ಆರ್​.ಐ ಮಾರ್ಗದರ್ಶನದಲ್ಲಿ ಕರಂಭಟನಾಳ ಶ್ರೀಗುರು ಗಂಗಾಧರೇಶ್ವರ ಆಹಾರ ಉತ್ಪನ್ನಗಳ ಸಮಿತಿಯ ಅಭಿಲಾಶೆಯಂತೆ ಗ್ರೇಪ್ಸ್​ ಮತ್ತು ವೈನ್​ಬೋರ್ಡ್​ ಸಹಕಾರದೊಂದಿಗೆ ಕರಂಭಟನಾಳ ಶ್ರೀ ಗುರು ಗಂಗಾಧರೇಶ್ವರ ಆಹಾರ ಉತ್ಪನ್ನ ಸಮಿತಿಯವರು ತಮ್ಮ ತೋಟದಲ್ಲಿ ಬೆಳೆದ ಒಣದ್ರಾಯಲ್ಲಿ ಜಾಮ್​ ತಯಾರಿಸಿದ್ದಾರೆ.

ಮಠದ ಶಿವಕುಮಾರ ಶ್ರೀಗಳು, ತೋಟಗಾರಿಕೆ ಸಚಿವ ಎಸ್​.ಎಸ್​. ಮಲ್ಲಿಕಾರ್ಜುನ, ವಸತಿ ಸಚಿವ ಜಮೀರ್​ ಅಹ್ಮದ್​, ತೋಟಗಾರಿಕೆ ಇಲಾಖೆಯ ರಮೇಶ ಡಿ.ಎಸ್​. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net