ತಾಲೂಕಿನಲ್ಲಿ ಶೈಕ್ಷಣಿಕ ಮಟ್ಟ ಉನ್ನತಕ್ಕೇರಿಸಿ

18 MBL 3
Published on

ಮುಳಬಾಗಿಲು: ಶಿಕರು ವರ್ಷಪೂರ್ತಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ, ಆದ್ದರಿಂದ ಶಿಕರ ದಿನಾಚರಣೆಯ ದಿನದಂದು ಅವರನ್ನು ಗೌರವಿಸುವ ಕೆಲಸ ಮಾಡುವ ಸಲುವಾಗಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಿಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಇದನ್ನು ನಿಭಾಯಿಸುವಲ್ಲಿ ಶಿಕರು ಸಹ ಮುಂದೆ ಬಂದಿದ್ದಾರೆ ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್​ ಹೇಳಿದರು.

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶಿಕ ಸಂಟನೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಎಲ್ಲ ಶಿಕರು ಸಹಕಾರ ನೀಡಿದ ಕಾರಣ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಸಹ ಒಗ್ಗಟಿನ ಪ್ರದರ್ಶನ ತೋರಿಸಿ ತಾಲೂಕನ್ನು ಶೈಣಿಕ ವಲಯದಲ್ಲಿ ಉನ್ನತ ಮಟ್ಟಕ್ಕೆ ತರಬೇಕು ಎಂದು ಕೋರಿದರು.

ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸರ್ವೆಪಲ್ಲಿ ರಾಧಾಕೃಷ್ಣನ್​ ಅವರ ಭಾವಚಿತ್ರದ ಪುಷ್ಪ ಪಲ್ಲಕ್ಕಿಗೆ ಚಾಲನೆ ನೀಡಿ, ನಗರದಲ್ಲಿ ಮೆರವಣಿಗೆ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು.

ವಕೀಲರ ಸಂದ ಮಾಜಿ ಅಧ್ಯ ಎಂ.ಎಸ್​. ಶ್ರೀನಿವಾಸರೆಡ್ಡಿ ಅವರು ಶಿಕರ ದಿನಾಚರಣೆ ಮತ್ತು ಗುರುವಿನ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾಮಟ್ಟದ ಉತ್ತಮ ಶಿಕ ಪ್ರಶಸ್ತಿ ಪಡೆದು ನಿವೃತ್ತರಾದ ಶಿಕರಿಗೆ ಸನ್ಮಾನ ಮಾಡಲಾಯಿತು. ಪ್ರಾಣೇಶ್​ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net