ಸಮಸ್ಯೆಗಳ ವಿರುದ್ಧ ಧ್ವನಿಎತ್ತಿ

24 NRD 3
Published on

ನರಗುಂದ: ಸದೃಢ ಹಾಗೂ ಸುಭದ್ರ ಸರ್ಕಾರ ರಚಿಸಲು ಮತದಾನ ಒಂದು ಶಕ್ತಿಶಾಲಿ ಮಾರ್ಗವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಜ್ಞಾವಂತರೇ ಮತದಾನದಿಂದ ದೂರ ಉಳಿಯುತ್ತಿರುವುದು ಕಳವಳಕಾರಿ ಎಂದು ಬಿಎಲ್‌ಒ ವಿಜಯಲಕ್ಷ್ಮೀ ಹಿರೇಮಠ ಹೇಳಿದರು.

ತಾಲೂಕಿನ ಚಿಕ್ಕನರಗುಂದ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತದಾನವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಸಮಸ್ಯೆಗಳ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತುವುದು ಅವಶ್ಯ. ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಈ ಹಕ್ಕು ಚಲಾವಣೆ ಮೂಲಕ ನಮಗೆ ಬೇಕಾದ ಸರ್ಕಾರ ರಚಿಸಿಕೊಳ್ಳಬಹುದು ಎಂದರು.

ಕಾಲೇಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿವನಗೌಡ ಸಾಲೂಟಗಿ ಮಾತನಾಡಿದರು. ಬಿಎಲ್‌ಒಗಳಾದ ಗೀತಾ ಕಾಡದೇವರಮಠ, ನೀಲಗಂಗಾ ಮಾದರ, ಪ್ರಾಚಾರ್ಯ ಎಸ್.ವಿ. ದಂಡನಾಯ್ಕರ, ಮುತ್ತಣ್ಣ ಭೂಮಣ್ಣವರ ಸೋಮು ಹೊಂಗಲ, ಎಫ್.ಎಸ್. ಅಂಗಡಿ, ಕೆ.ಎಂ. ಮಾಕಣ್ಣನವರ, ಕಲಾವತಿ ಹೊಸಮನಿ, ಯಲ್ಲಮ್ಮ, ಪವಿತ್ರಾ, ಚೈತ್ರಾ ಓದೇಕಾರ, ಮಂಜುನಾಥ ಕುಂಬಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net