ಶತಕದ ಗಡಿ ದಾಟಿದ ಪೆಟ್ರೋಲ್ ದರ

petrol
Published on

ಸುಳ್ಯ: ಇದೇ ಮೊದಲ ಬಾರಿಗೆ ಸುಳ್ಯದಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದ್ದು, ಲೀಟರ್‌ಗೆ 100.18 ರೂ. ಆಗಿದೆ.

ಕರೊನಾ ಸಂಕಷ್ಟದ ನಡುವೆಯೂ ಇಂಧನ ದರ ಕಳೆದ ಒಂದೂವರೆ ತಿಂಗಳಿನಿಂದ ಏರುತ್ತಲೇ ಇದೆ. ಶುಕ್ರವಾರ ಮತ್ತೆ ಪೆಟ್ರೋಲ್ ದರದಲ್ಲಿ 28 ಪೈಸೆ ಏರಿಕೆಯಾಗಿ ಶತಕ ದಾಟುವಂತಾಗಿದೆ. ಸುಳ್ಯದಲ್ಲಿ ಶುಕ್ರವಾರ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸುವವರು ದರ ಪಟ್ಟಿಯನ್ನು ವೀಕ್ಷಿಸಿದರೆ ಅದು ಲೀಟರ್‌ಗೆ 100.18 ರೂ. ತೋರಿಸುತ್ತಿತ್ತು. ಅಲ್ಲದೆ ಈಗಾಗಲೇ ಶತಕ ದಾಟಿರುವ ಪ್ರೀಮಿಯಂ ಪೆಟ್ರೋಲ್ ದರ ಕೂಡ 28 ಪೈಸೆ ಏರಿದ್ದು, 103.66ರೂ.ಗೆ ಹೆಚ್ಚಳವಾಗಿದೆ. ಡೀಸೆಲ್ ಬೆಲೆಯಲ್ಲಿಯೂ 31 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 92.95 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net