ನ್ಯೂಮೋನಿ ಬಗ್ಗೆ ಅರಿವು ಮೂಡಿಸಿ

19 nrp 2
Published on

ಎನ್.ಆರ್.ಪುರ: ನಿಮೋನಿಯಾ ಕಾಯಿಲೆ ಬಗ್ಗೆ ಅರಿವು ಮೂಡಿಸುವುದು, ನ್ಯೂಮೋನಿಯಾದಿಂದ ಮಕ್ಕಳ ಸಾವಿನ ಪ್ರಮಾಣ ತಡೆಗಟ್ಟುವುದು ವಿಶ್ವ ನಿಮೋನಿಯಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಹೇಳಿದರು.

ಆರೋಗ್ಯ ಇಲಾಖೆ, ನಾಗಲಾಪುರ ಗ್ರಾಪಂ ಆಶ್ರಯದಲ್ಲಿ ನಡೆದ ವಿಶ್ವ ನಿಮೋನಿಯಾ ದಿನಾಚರಣೆ ಹಾಗೂ ಗ್ರಾಮಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮೋನಿಯಾ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಮರಣ ಉಂಟುಮಾಡುವ ಕಾಯಿಲೆಯಾಗಿದೆ ನಿರಂತರ ಕೆಮ್ಮು ಜ್ವರ ಉಸಿರಾಟದ ತೊಂದರೆ, ಎದೆ ನೋವು, ಆಯಾಸ,ನಿಶಕ್ತಿ, ಬೆವರುವುದು ಈ ಕಾಯಿಲೆಯ ಲಕ್ಷಣಗಳು. ಪ್ರತಿ ತಿಂಗಳು ಕ್ಷೇತ್ರಮಟ್ಟದ ಆರೋಗ್ಯ ಸಿಬ್ಬಂದಿಯವರು ಪ್ರತಿ ಮನೆಗೆ ಭೇಟಿ ನೀಡಿ ನಿಮೋನಿಯಾ ಸಮೀಕ್ಷೆ ನಡೆಸುತ್ತಾರೆ ಎಂದು ತಿಳಿಸಿದರು.

ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ಮಾತನಾಡಿ, ಸಾರ್ವಜನಿಕರು ಆರೋಗ್ಯದ ಕಡೆ ಹೆಚ್ಚಿನ ಆದ್ಯತೆ ನೀಡುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು. ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡದವರಿಗೆ ಗ್ರಾಮ ಆರೋಗ್ಯ ತರಬೇತಿ ನೀಡಲಾಯಿತು. ಪಿಡಿಒ ಪ್ರೇಮ್‌ಕುಮಾರ್, ಪಿ.ಪಿ.ಬೇಬಿ, ಡೈಸಿ, ಶೋಭಿ, ನಾಗಲತಾ, ಪವನಕರ್, ಶಶಿಕಲಾ ಮಂಜುಳಾ, ಗಾಯಿತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net