

ಶೃಂಗೇರಿ: ಪಟ್ಟಣದ ಮುಖ್ಯರಸ್ತೆ ಭಾರತಿಬೀದಿ. ವೆಲ್ಕಮ್ೇಟ್ನಿಂದ ಶ್ರೀಮಠದವರೆಗಿನ 900 ಮೀಟರ್ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆಯ ಕೆಇಬಿ ಕಚೇರಿ ಎದುರಿನ ರಾಜಕಾಲುವೆಗೆ ತಡೆಗೋಡೆಯೇ ಇಲ್ಲ.
ಶ್ರೀಮಠಕ್ಕೆ ಹೋಗಲು, ಅಂಗಡಿ ಮುಂಗಟ್ಟುಗಳಲ್ಲಿ ತರಕಾರಿ, ದಿನಸಿ ಸಾಮಗ್ರಿ ಖರೀದಿಗೆ ಜನರು ಹೆಚ್ಚಾಗಿ ಈ ರಸ್ತೆಯಲ್ಲೇ ಓಡಾಡುತ್ತಾರೆ. ಶಿವಮೊಗ್ಗ, ಚಿಕ್ಕಮಂಗಳೂರು, ಬೆಂಗಳೂರು, ಮೈಸೂರು ಮುಂತಾದೆಡೆಯಿಂದ ಬರುವ ಖಾಸಗಿ ವಾಹನಗಳು ಹೆಚ್ಚಾಗಿ ಈ ರಸ್ತೆಯಲ್ಲೇ ಸಂಚರಿಸುತ್ತವೆ.
ಮಳೆಗಾಲದಲ್ಲಿ ರಾಜಕಾಲುವೆ ತುಂಬಿಹರಿಯುತ್ತದೆ. ವಾಹನ ಸವಾರರು ರಾಜಕಾಲುವೆಗೆ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿ ರಾಜಕಾಲುವೆಗೆ ತಡೆಗೋಡೆ ನಿರ್ವಿುಸಬೇಕು ಎಂದು ಆಟೋ ಮತ್ತಿತರ ವಾಹನ ಚಾಲಕರು ಹಲವು ಬಾರಿ ಮನವಿ ಮಾಡಿದರೂ ಪಪಂ ಮೀನಮೇಷ ಎಣಿಸುತ್ತಿದೆ.
2018-19ರಲ್ಲಿ ನಗರೋತ್ಥಾನ ಯೋಜನೆಯ ಮೂರನೇ ಹಂತದಲ್ಲಿ ಪಪಂಗೆ 1.70ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ ಹನುಮಂತನಗರ ರಸ್ತೆ ಡಾಂಬರೀಕರಣ, ಇಂಡಿಯನ್ ಒವರ್ಸೀಸ್ ಸಮೀಪ ಕಾಂಕ್ರೀಟ್ ರಸ್ತೆ, ಶಾರದಾ ನಗರದಲ್ಲಿ ಪಪಂ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಹಾಗೂ ಸುಮಾರು 60ರಿಂದ 70 ಮೀಟರ್ ಕೆಇಬಿ ಎದುರಿನ ಕಾಂಕ್ರೀಟ್ ರಸ್ತೆ ವಿಸ್ತರಣೆಗಾಗಿ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿ ಕಾರ್ಯ ನಡೆಸಲಾಗಿತ್ತು. ಆದರೆ ಅನುದಾನ ಕೊರತೆಯಿಂದ ರಾಜಕಾಲುವೆಗೆ ತಡೆಗೋಡೆಯನ್ನು ನಿರ್ವಿುಸಿಲ್ಲ.
2019ರಲ್ಲಿ ಪಪಂಗೆ ಚುನಾವಣೆ ನಡೆದಿದ್ದರೂ ಸದಸ್ಯರಿಗೆ ಮಾತ್ರ ಆಡಳಿತ ನಡೆಸುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಹಾಗಾಗಿ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿರುವುದು ತಡೆಗೋಡೆ ನಿರ್ವಣಕ್ಕೆ ಹಿನ್ನಡೆಯಾಗಿದೆ.
2020-21ರ 15ನೇ ಹಣಕಾಸು ಯೋಜನೆಯಡಿ 2.10 ಲಕ್ಷ ರೂ. ಮೊತ್ತವನ್ನು ಬ್ಯಾರಿಕೇಡ್ ನಿರ್ವಿುಸಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಟೆಂಡರ್ ಅನುಮೋದನೆ ಬಳಿಕ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಶಿವ ನಾಯ್್ಕ ವಿಜಯವಾಣಿಗೆ ಮಾಹಿತಿ ನೀಡಿದರು.