ಬಂಗಾಡಿ ಪೇಟೆಯಲ್ಲಿ ರಸ್ತೆಯಲ್ಲೇ ಮಳೆ ನೀರು!

New Project (75)
Published on

ಬೆಳ್ತಂಗಡಿ: ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಬೆಳ್ತಂಗಡಿ - ಕಿಲ್ಲೂರು ರಸ್ತೆಯ ಬಂಗಾಡಿ ಪೇಟೆಯಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಇಲ್ಲಿನ ಜೈನ ಬಸದಿಯ ಮುಂಭಾಗದಿಂದ ಹಲವು ಮೀಟರ್ ದೂರದ ವರೆಗೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆಯಲ್ಲಿ ಖಾಸಗಿ ಬಸ್‌ಗಳ ಸಹಿತ ಪ್ರತಿದಿನ ಅನೇಕ ವಾಹನಗಳು ಓಡಾಟ ನಡೆಸುತ್ತವೆ. ಸರ್ಕಾರಿ ಪ್ರಾಥಮಿಕ ಶಾಲೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂ, ರಾಷ್ಟ್ರೀಕೃತ ಬ್ಯಾಂಕ್ ಕೂಡ ಇದ್ದು, ಇವುಗಳಿಗೆ ತೆರಳಬೇಕಾದರೆ ಹೊಳೆಯಂತಾಗುವ ರಸ್ತೆಯಲ್ಲಿ ಸಾಗಬೇಕಿದೆ. ಈ ಪ್ರದೇಶದಲ್ಲಿ ಕಾಲ್ನಡಿಗೆ ಮೂಲಕ ಕ್ರಮಿಸುವ ಜನರ ಮೇಲೆ, ಸಹಕಾರಿ ಸಂಕ್ಕೆ ಬರುವ ಗ್ರಾಹಕರಿಗೆ, ಸಿಬ್ಬಂದಿಗೆ ವಾಹನಗಳು ಚಲಿಸುವಾಗ ಕೆಸರಿನ ಸಿಂಚನ ಮಾಮೂಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net