ಮನೆಗಳಿಗೆ ನುಗ್ಗಿದ ಮಳೆ ನೀರು

12Blh4
Published on

ಬೈಲಹೊಂಗಲ: ಪಟ್ಟಣದಲ್ಲಿ ನಾಲ್ಕೆದು ಗಂಟೆ ನಿರಂತರವಾಗಿ ಸುರಿದ ಧಾರಕಾರ ಮಳೆಯಿಂದ ಗುರುವಾರ ಜನಜೀವನ ಅಸ್ತವ್ಯಸ್ತವಾಯಿತು.

ರಸ್ತೆಗಳ ಮೇಲೆ ರಭಸವಾಗಿ ಹರಿದ ನೀರಿನಿಂದ ವಾಹನ ಸವಾರರು ಪರದಾಡಿದರು. ಕೆಲಕಾಲ ಸಂಚಾರದಟ್ಟನೆ ಉಂಟಾಯಿತು. ಕೆಲವಡೆ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಟ್ಟರು. ಪುರಸಭೆ ಅಧಿಕಾರಿಗಳಿಗೆ ಜನರು ಹಿಡಿ ಶಾಪ ಹಾಕಿದರು. ಸೋಮವಾರ ಪೇಟೆ ಯಲ್ಲಿ ತರಕಾರಿ ತೇಲಿ ಹೋದವು.

ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಪುರಸಭೆ ಅಧ್ಯ ವಿಜಯ ಬೋಳನ್ನವರ, ಮುಖ್ಯಾಧಿಕಾರಿ ವೀರೇಶ ಹಸಬಿ, ಇಂಜನಿಯರ್​ ಬಸನಗೌಡ ಪಾಟೀಲ, ಸುರೇಶ ಪಾಟೀಲ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಮನೆಗಳಿಗೆ ನೀರು ಬರದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮನೆಗಳಲ್ಲಿ ನೀರು ನುಗ್ಗಿ ತೊಂದರೆಯಾದವರಿಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net