

ಗುಂಡ್ಲುಪೇಟೆ: ಗಾಳಿ ಮಳೆ ಹಾಗೂ ವನ್ಯಜೀವಿಗಳು ದಾಳಿ ನಡೆಸಿದ ಪರಿಣಾಮ ಕಾಡಂಚಿನ ಗ್ರಾಮದ ರೈತರ ಫಸಲು ನಾಶವಾಗಿದೆ.
ಭಾನುವಾರ ಸಂಜೆ ಬೀಸಿದ ಜೋರು ಗಾಳಿ ಮಳೆಗೆ ಗ್ರಾಮದ ವಿರೂಪಾಕ್ಷ ಅವರ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನೆಲಕಚ್ಚಿವೆ. ಅದೇ ರಾತ್ರಿ ಕಾಡಾನೆಗಳು ಗ್ರಾಮದ ಅಂಕೇಶ್ ಮತ್ತು ಮಲ್ಲಣ್ಣ ಅವರ ಜಮೀನುಗಳಿಗೆ ನುಗ್ಗಿ ಬಾಳೆ ಗಿಡಗಳನ್ನು ನಾಶಮಾಡಿವೆ. ಇದರಿಂದ ರೈತರು ಸಾಲ ಮಾಡಿ ಬೆಳೆದಿದ್ದ ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಆದ್ದರಿಂದ ಸರ್ಕಾರ ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನು ಭಾನುವಾರ ಬೀಸಿದ ಜೋರು ಗಾಳಿಗೆ ಮಲ್ಲಯ್ಯನಪುರ ಗ್ರಾಮದ ಸಿದ್ದಶೆಟ್ಟಿ ಎಂಬುವರ ಜಮೀನಿನಲ್ಲಿದ್ದ ವಿದ್ಯುತ್ ಕಂಬ ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.