ಮಳೆಯಿಂದ 30.03 ಹೆಕ್ಟೇರ್ ಬೆಳೆ ಹಾನಿ

dc meeting
Published on

ಶೀಘ್ರ ಪರಿಹಾರಕ್ಕೆ ತಾಕೀತು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮುಂಗಾರು ಮಳೆ ಆರಂಭವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಳೆ ಸನ್ನದ್ಧತೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮುಂಗಾರು ಮಳೆ ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳುವ ಕುರಿತ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸುರಿದ ಬಿರುಗಾಳಿಸಹಿತ ಮಳೆಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.31 ಹೆಕ್ಟೇರ್ ಹಾಗೂ ಹೊಸಕೋಟೆ 5.62 ಹೆಕ್ಟೇರ್ ಸೇರಿ 6.93 ಹೆಕ್ಟೇರ್ ಕೃಷಿ ಬೆಳೆಯಾದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಮಾಹಿತಿ ನೀಡಿದರು. ತೋಟಗಾರಿಕೆ ಬೆಳೆಗಳಾದ ಮಾವು 11.70 ಹೆಕ್ಟೇರ್, ಟೊಮ್ಯಾಟೊ 2 ಹೆಕ್ಟೇರ್, ಸೇವಂತಿಗೆ 5 ಹೆಕ್ಟೇರ್, ಬದನೆಕಾಯಿ 1.2 ಹೆಕ್ಟೇರ್, ಹೀರೆಕಾಯಿ 1.28 ಹೆಕ್ಟೇರ್, ಬೀನ್ಸ್ 1.00 ಹೆಕ್ಟೇರ್ ಹಾನಿಯಾಗಿದೆ. ಉಳಿದಂತೆ ಎಲೆಕೋಸು, ಹೂಕೋಸು, ಚೆಂಡು ಹೂಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಹೊಸಕೋಟೆಯಲ್ಲಿ 17 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ ್ಲ 6.10 ಹೆಕ್ಟೇರ್ ಸೇರಿ 23.10 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ ಸಭೆಯಲ್ಲಿ ತಿಳಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶೀಘ್ರವೇ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹಾನಿಯಾದ ಕಟ್ಟಡಗಳಿಗೆ ಶೀಘ್ರ ಪರಿಹಾರ ದೊಡ್ಡಬಳ್ಳಾಪುರದಲ್ಲಿ ಒಂದು ಮನೆ ಸೇರಿ ಶಾಲೆಯ ಮೇಲ್ಛಾವಣಿಗೆ ಅಲ್ಪ ಹಾನಿಯಾಗಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ಒಂದು ಮನೆಗೆ ಹೆಚ್ಚು ಪ್ರಮಾಣದ ಹಾನಿಯಾಗಿದೆ. ಉಳಿದಂತೆ ನೆಲಮಂಗಲ ಹಾಗೂ ದೇವನಹಳ್ಳಿಯಲ್ಲಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಹಾನಿಯಾದ ಮನೆ ಕಟ್ಟಡಗಳಿಗೆ ಶೀಘ್ರ ಪರಿಹಾರ ಹಾಗೂ ದುರಸ್ಥಿ ಕ್ರಮ ಕೈಗೊಳ್ಳುವಂತೆ ಡಿಸಿ ಆರ್.ಲತಾ ಸೂಚಿಸಿದರು.

ವಿದ್ಯುತ್ ಕಂಬಗಳಿಗೆ ಹಾನಿ ಹೆಚ್ಚು ಮಳೆ ಮತ್ತು ಗಾಳಿಯಿಂದ ನೆಲಮಂಗಲ ವ್ಯಾಪ್ತಿಯಲ್ಲಿ 41 ವಿದ್ಯುತ್ ಕಂಬ, 32 ಟ್ರಾನ್‌ಸ್ಾರ್ಮರ್, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 22 ವಿದ್ಯುತ್ ಕಂಬ, 26 ಟ್ರಾನ್‌ಸ್ಾರ್ಮರ್ ಹೊಸಕೋಟೆ ವ್ಯಾಪ್ತಿಯಲ್ಲಿ 27 ವಿದ್ಯುತ್ ಕಂಬಗಳು, 3 ಟ್ರಾನ್‌ಸ್ಾರ್ಮರ್, ದೇವನಹಳ್ಳಿಯಲ್ಲಿ 25 ವಿದ್ಯುತ್ ಕಂಬಗಳು ,2 ಟ್ರಾನ್‌ಸ್ಾರ್ಮರ್‌ಗಳಿಗೆ ಹಾನಿಯಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು. ನೆಲಕ್ಕೆ ಉರುಳಿರುವ ಕಂಬ ಹಾಗೂ ಟ್ರಾನ್ಸಫಾರ್ಮರ್‌ಗಳನ್ನು ಬದಲಾಯಿಸಿ ವಿದ್ಯುತ್ ವ್ಯತ್ಯಯವಾಗದಂತೆ ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.

ಮುಂಜಾಗ್ರತೆ ವಹಿಸಬೇಕು: ಮಳೆಗಾಲಕ್ಕೆ ಮುಂಚಿತವಾಗಿ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆ, ಚರಂಡಿ, ಸೇತುವೆಗಳ ಬಳಿ ಹೂಳು ತೆಗೆದು ಸ್ವಚ್ಛಗೊಳಿಸಿರಬೇಕು. ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸುವುದು. ಪ್ರವಾಹದಿಂದ ತಗ್ಗು ಪ್ರದೇಶಗಳಲ್ಲಿ, ನಿಂತ ನೀರನ್ನು ಹೊರಹಾಕಲು ಪಂಪ್‌ಸೆಟ್‌ಗಳನ್ನು ಸಜ್ಜುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ 2023ರ ಮುಂಗಾರು ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡು, ಮುಂಗಾರು ಮಳೆ ಹಾಗೂ ಚಂಡಮಾರುತಗಳ ಪರಿಣಾಮಗಳನ್ನು ತಗ್ಗಿಸುವ ಮೂಲಕ ವಿಪತ್ತು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net