ರೈತರ ಮೊಗವರಳಿಸಿದ ಮಳೆರಾಯ

SIRSI RAIN
Published on

ಶಿರಸಿ: ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಶಿರಸಿ ಜನರಿಗೆ ಅಂತೂ ಶುಕ್ರವಾರ ಮಳೆಯ ಸಿಂಚನವಾಗಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿಸಿಲಿನ ಝುಳಕ್ಕೆ ಜಲಮೂಲಗಳು ಬತ್ತಿಹೋಗಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ತಾಲೂಕಿನ ಹಲವು ಭಾಗಗಳಲ್ಲಿ ನಿರ್ವಣವಾಗಿತ್ತು. ಜೂನ್ ಕೊನೆಯ ವಾರದಲ್ಲೂ ಮಳೆ ಬಾರದೇ ಹೋದರೆ ಮುಂದಿನ ಗತಿಯೇನು ? ಎಂದು ರೈತರು ತಲೆಮೇಲೆ ಕೈಹೊತ್ತು ಕುಳಿತಿದ್ದರು. ಇದೀಗ ಮಳೆರಾಯನ ಆಗಮನವಾಗಿದ್ದು ಕೃಷಿ ಚಟುವಟಿಕೆಯತ್ತ ರೈತರು ಮುಖ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net